ನವದೆಹಲಿ: ಚಿನ್ನದಂಗಡಿ ಒಂದರ ಗೋಡೆ ಒಡೆದು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ (Jewellery) ದೋಚಿದ ಪ್ರಕರಣ ದೆಹಲಿಯ (Delhi) ಭೋಗಲ್ ಪ್ರದೇಶದಲ್ಲಿ ನಡೆದಿದೆ.
ಸಂಜೀವ್ ಜೈನ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಈ ಕಳ್ಳತನವಾಗಿದೆ. ಅವರು ಎರಡು ದಿನಗಳಿಂದ ಅಂಗಡಿ ಮುಚ್ಚಿದ್ದರು. ಇಂದು (ಮಂಗಳವಾರ) ಅಂಗಡಿ ತೆರೆದಾಗ ಇಡೀ ಅಂಗಡಿಯಲ್ಲಿ ಧೂಳು ತುಂಬಿತ್ತು. ಅಲ್ಲದೇ ಸಿಸಿ ಕ್ಯಾಮೆರಾಗಳಿಗೆ ಹಾನಿ ಮಾಡಲಾಗಿತ್ತು. ಬಳಿಕ ಅಂಡಿಯನ್ನು ಪರೀಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಸಂಜೀವ್ ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಯ ಕುತ್ತಿಗೆಗೆ 30 ಬಾರಿ ಚುಚ್ಚಿ, ಕಬ್ಬಿಣದ ಬಾಣಲೆಯಲ್ಲಿ ಹೊಡೆದು ಕೊಂದ ಪಾಪಿ ಮಗಳು!
ಸ್ಟ್ರಾಂಗ್ ರೂಮ್‍ನ ಗೋಡೆಯಲ್ಲಿ ರಂಧ್ರ ಕೊರೆದಿದ್ದಾರೆ. ಬಳಿಕ ಟೆರೇಸ್ ಮೂಲಕ ಬಂದು ಸಿಸಿಟಿವಿಗಳಿಗೆ ಹಾನಿಮಾಡಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ.
ಈ ಪ್ರಕರಣದ ಬಗ್ಗೆ ಮಾತನಾಡಿರುವ ಡಿಸಿಪಿ ರಾಜೇಶ್ ಡಿಯೋ, ಪ್ರಕರಣದ ತನಿಖೆ ನಡೆಯುತ್ತಿದೆ. ಅಂಗಡಿಯನ್ನು ಎರಡು ದಿನ ಮುಚ್ಚುವ ವಿಚಾರ ತಿಳಿದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]