ಬೆಂಗಳೂರು: ಕಳೆದ 25 ದಿನಗಳ ಬಳಿಕ ಇದೀಗ ಸಿಎಂ ನಿವಾಸದ ಬಳಿ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಸಿಎಂ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ರಸ್ತೆಯನ್ನು ಇವತ್ತು ಓಪನ್ ಮಾಡಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ.
Advertisement
ಸುಮಾರು 25 ದಿನಗಳ ಬಳಿಕ ಸಿಎಂ ಮನೆ ರಸ್ತೆ ಸಂಚಾರಕ್ಕೆ ತೆರಯಲಾಗಿದೆ. ಕೊರೊನಾ ಸೋಂಕಿತರು ಅಂಬುಲೆನ್ಸ್ ನಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದರು. ಕೆಲವು ಸೋಂಕಿತರು ಆಟೋದಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದರು. ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯನ್ನೂ ಕ್ಲೋಸ್ ಮಾಡಲಾಗಿತ್ತು. ಇದನ್ನೂ ಓದಿ: ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು
Advertisement
Advertisement
25 ದಿನಗಳ ಹಿಂದೆ ವಿಂಡ್ಸರ್ ಸ್ಕ್ವೇರ್ ನಿಂದ ಶಿವಾನಂದ ಸರ್ಕಲ್ ತನಕ ರಸ್ತೆ ಕ್ಲೋಸ್ ಮಾಡಿದ್ದರು. ಬೆಡ್, ಆಕ್ಸಿಜನ್ ಸಮಸ್ಯೆ ಇದೆ ಅಂತೇಳಿ ವಾರದಲ್ಲಿ ಎರಡ್ಮೂರು ಬಾರಿ ಪ್ರತಿಭಟನೆ ಬಿಸಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ತಟ್ಟಿತ್ತು. ಆಗ ಎಚ್ಚೆತ್ತ ಪೊಲೀಸರು ಇಡೀ ರಸ್ತೆಯನ್ನೇ ಕ್ಲೋಸ್ ಮಾಡಿ ಬಂದೋಬಸ್ತ್ ಮಾಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಕೂಡ ಮನವಿ ಮಾಡಿತ್ತು. ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ತೆರವುಗೊಳಿಸಬೇಕು ಎಂದು ಆಗ್ರಹಿಸಿತ್ತು. ಈಗ ಕೊರೊನಾ ಇಳಿಮುಖವಾದ ಬೆನ್ನಲ್ಲೇ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗಿದೆ.
Advertisement