ನವದೆಹಲಿ: ಬರೋಬ್ಬರಿ 241 ಟಿ-20 ಪಂದ್ಯಗಳನ್ನು ಆಡಿರುವ ಭಾರತದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರು, ಶುಕ್ರವಾರ ಟಿ-20 ಮಾದರಿ ಪಂದ್ಯದಲ್ಲಿ ಮೊದಲ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಶುಕ್ರವಾರ ದುಬೈನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಳು ರನ್ಗಳ ಅಂತರದಲ್ಲಿ ಸೋತಿದೆ. ತಂಡ ಸೋತರು 34 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದ ರವೀಂದ್ರ ಜಡೇಜಾ, 13 ವರ್ಷಗಳ ಕಾಲ 241 ಟಿ-20 ಪಂದ್ಯಗಳನ್ನಾಡಿದ ನಂತರ ತಮ್ಮ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
Advertisement
Advertisement
2007ರಲ್ಲಿ ಭಾರತದ ಪರ ಟಿ-20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ರವೀಂದ್ರ ಜಡೇಜಾ, ಸತತವಾಗಿ ಒಟ್ಟು 13 ವರ್ಷದಿಂದ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ ಸೇರಿದಂತೆ ಒಟ್ಟಾರೆ ಸುಮಾರು 241 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಈವೆರಗೂ ಕೂಡ ಟಿ-20 ಮಾದರಿಯಲ್ಲಿ ಒಂದು ಅರ್ಧಶಕವನ್ನು ಸಿಡಿಸಿರಲಿಲ್ಲ. 2012ರ ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜಸ್ ತಂಡದ ವಿರುದ್ಧ 48 ರನ್ ಗಳಿಸಿದ್ದೇ ಟಿ-20ಯಲ್ಲಿ ಅವರ ಗರಿಷ್ಠ ಮೊತ್ತವಾಗಿತ್ತು.
Advertisement
Jadeja gets to his maiden IPL FIFTY and departs straight after.
Live – https://t.co/J1jCJPE40f #Dream11IPL #CSKvSRH pic.twitter.com/ZZVbwFFKNu
— IndianPremierLeague (@IPL) October 2, 2020
Advertisement
ಜಡೇಜಾ ವಿಶೇಷ ದಾಖಲೆ:
ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಜಡೇಜಾ ಅವರು, ಐಪಿಎಲ್ನಲ್ಲಿ 2 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ಜೊತೆಗೆ ಐಪಿಎಲ್ನಲ್ಲಿ 2 ಸಾವಿರ ರನ್ ಮತ್ತು 100ಕ್ಕೂ ಹೆಚ್ಚು ವಿಕೆಟ್ ಕಿತ್ತ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಐಪಿಎಲ್ನ 174 ಪಂದ್ಯಗಳಲ್ಲಿ 2 ಸಾವಿರ್ ರನ್ ಭಾರಿಸಿರುವ ಜಡೇಜಾ ಅವರು, ಅದೇ 174 ಪಂದ್ಯಗಳಲ್ಲಿ 110 ವಿಕೆಟ್ ಪಡೆದು ತಾನೊಬ್ಬ ಉತ್ತಮ ಆಲ್ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಇದನ್ನು ಓದಿ: ಪಂದ್ಯ ಸೋತ್ರೂ ಮನಸ್ಸು ಗೆದ್ದ ಮಹಿ – ಧೋನಿ ಪ್ರಯತ್ನಕ್ಕೆ ಫ್ಯಾನ್ಸ್ ಫಿದಾ
ಜೊತೆಗೆ ಟಿ-20 ಕ್ರಿಕೆಟ್ನಲ್ಲಿ ದೀರ್ಘಾವಧಿ ಕಾಲದಿಂದ ಒಂದು ಅರ್ಧಶತಕವನ್ನು ಸಿಡಿಸದೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರೆಂಬ ದಾಖಲೆ ಕೂಡ ಜಡೇಜಾ ಅವರ ಹೆಸರಿನಲ್ಲಿತ್ತು. ಆದರೆ ಶುಕ್ರವಾರ ನಡೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಜೊತೆಗೆ ಧೋನಿಯ ಜೊತೆ ಉತ್ತಮ ಜೊತೆಯಾಟವಾಡಿದ ಅವರು, ಐದನೇ ವಿಕೆಟ್ಗೆ 56 ಎಸೆತಗಳಲ್ಲಿ 71 ರನ್ ಸೇರಿಸಿದ್ದರು.