ನವದೆಹಲಿ: ಒಂದೇ ದಿನ ಒಟ್ಟು 24,248 ಹೊಸ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, 425 ಮಂದಿಯನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ.
ದೇಶದಲ್ಲಿ 6,97,413 ಪ್ರಕರಣಗಳಲ್ಲಿ 2,53,287 ಕೇಸ್ ಸಕ್ರಿಯವಾಗಿವೆ. ದೇಶದಲ್ಲಿ ಇದುವರೆಗೂ ಕೊರೊನಾದಿಂದ 19,693 ಮಂದಿ ಸಾವನ್ನಪ್ಪಿದ್ದಾರೆ. ಪ್ರಪಂಚದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಜುಲೈ 5ರವರೆಗೆ 99,69,662 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ನಿನ್ನೆ ಒಂದೇ ದಿನ 1,80,596 ಜನರು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
India reports a spike of 24,248 new #COVID19 cases and 425 deaths in the last 24 hours. Positive cases stand at 6,97,413 including 2,53,287 active cases, 4,24,433 cured/discharged/migrated & 19,693 deaths: Ministry of Health & Family Welfare pic.twitter.com/3iPDtPJyvN
— ANI (@ANI) July 6, 2020
Advertisement
ವಿಶ್ವದಲ್ಲಿ ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನ ತಲುಪಿದೆ. ಅಮೆರಿಕ ಮತ್ತು ಬ್ರೆಜಿಲ್ ಮೊದಲೆರಡು ಸ್ಥಾನಗಳಲ್ಲಿವೆ. ಅಮೆರಿಕಾದಲ್ಲಿ 29,82,928, ಬ್ರೆಜಿಲ್ ನಲ್ಲಿ 16,04,585 ಮಂದಿಗೆ ಕೊರೊನಾ ಸೋಂಕು ತಗುಲಿದೆ. ರಷ್ಯಾ, ಪೆರು, ಸ್ಪೇನ್ ಕ್ರಮವಾಗಿ 4, 5 ಮತ್ತು 6ನೇ ಸ್ಥಾನದಲ್ಲಿವೆ. ಇನ್ನೂ ಚೀನಾ 22ನೇ ಸ್ಥಾನದಲ್ಲಿದೆ.
Advertisement
ಬೆಂಗಳೂರಲ್ಲಿ ಕೊರೊನಾ ಪ್ರತಿ ದಿನದ ದಾಖಲೆಯೂ ಪುಡಿಪುಡಿ
-2 ಸಾವಿರದಂಚಿಗೆ ಬಂದು ನಿಂತ ಮಹಾಮಾರಿ
-25 ಪೊಲೀಸ್ ಸ್ಟೇಷನ್ ಸೀಲ್ಡೌನ್https://t.co/yBM37BBn7f#CoronaVirus #COVID19 #Bengaluru #Sealdown
— PublicTV (@publictvnews) July 5, 2020