ಭೋಪಾಲ್: 24 ವರ್ಷದ ಯುವಕನೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದು, ಇದನ್ನು ವಿರೋಧಿಸಿದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.
ಈ ಘಟನೆ ಶನಿವಾರ ಭೋಪಾಲ್ ನ ಕೈಲರಸ್ ನಗರದಲ್ಲಿ ನಡೆದಿದೆ. ಆರೋಪಿ ಪಾಪಿ ಮಗನನ್ನು ಸೂರಜ್ ಮಿತ್ತಲ್ ಎಂಬವುದಾಗಿ ಗುರುತಿಸಲಾಗಿದ್ದು, ಈತನನ್ನು ಸೋಮವಾರ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
Advertisement
ಮೃತ ದುರ್ದೈವಿ ಮಹಿಳೆಯನ್ನು ಲಕ್ಷ್ಮೀ ಎಂಬುವುದಾಗಿ ಗುರುತಿಸಲಾಗಿದ್ದು, ಈಕೆಯ ಪತಿ 8 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆ ಬಳಿಕ ಲಕ್ಷ್ಮೀ ತನ್ನ ಮಗನ ಜೊತೆ ಜೀವನ ನಡೆಸುತ್ತಿದ್ದಳು. ಆದ್ರೆ ಕುಡುಕ ಮಗ ಇಂದು ತನ್ನ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
Advertisement
ಶನಿವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಸೂರಜ್, ತಾಯಿಯನ್ನೇ ರೇಪ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ತಾಯಿ ಮಗನ ಕೃತ್ಯವನ್ನು ವಿರೋಧಿಸಿದ್ದಾಳೆ. ಇದರಿಂದ ಸಿಟ್ಟುಗೊಂಡ ಮಗ ಸೂರಜ್ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಆರಾಮಾಗಿ ನಿದ್ದೆ ಮಾಡಿದ್ದಾನೆ.
Advertisement
ಕಳೆದ ರಾತ್ರಿ ಸೂರಜ್ ಮನೆಯಿಂದ ಜೋರಾಗಿ ಕಿರುಚಿಕೊಳ್ಳುವ ಶಬ್ಧ ಕೇಳಿಸಿರುವುದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕೊಲೆಯ ಹಿಂದೆ ಹೊರಗಿನವರ ಕೈವಾಡವಿರುವ ಬಗ್ಗೆ ಎಸ್‍ಐ ಎಪಿ ಸಿಂಗ್ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಆರೋಪಿಯನ್ನು ಸೆರೆಹಿಡಿದಿದ್ದು, ನ್ಯಾಯಾಂಗ ಬಂಧನಕ್ಕೆ ಇಂದು ಒಪ್ಪಿಸಿದ್ದಾರೆ.