ತಿರುವನಂತಪುರ: ಗೋಮಾಂಸ ಸೇವಿಸಿದ್ದಾರೆಂದು ಆರೋಪಿಸಿ ಬುಡಕಟ್ಟು ಜನಾಂಗದ 24 ಮಂದಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.
ಇಡುಕ್ಕಿ ಜಿಲ್ಲೆಯ ಮಾರಯೂರು ಅರಣ್ಯ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಸ್ಥಳೀಯ ಸ್ವಯಂ ಆಡಳಿತ ಮತ್ತು ಬುಡಕಟ್ಟು ಸಚಿವಾಲಯವು, ಜನಾಂಗದ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಪೋಷಕರ ಚಿತಾಭಸ್ಮ ಸ್ವೀಕರಿಸಿದ ಬಿಪಿನ್ ರಾವತ್ ಪುತ್ರಿಯರು – ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ
ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಈವರೆಗೂ ಯಾರೂ ಸಹ ಠಾಣೆಗೆ ಬಂದು ದೂರು ನೀಡಿಲ್ಲ. ಸ್ಥಳೀಯರಿಂದ ತಮಗೆ ಬಂದ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಮಾಂಸ ಸೇವಿಸುವ ಮೂಲಕ ನಮ್ಮ ಪೂರ್ವಿಕರ ಪದ್ಧತಿಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬುಡಕಟ್ಟು ಜನಾಂಗದ ಮುಖಂಡರ ನೇತೃತ್ವದಲ್ಲಿ ಕೆಲವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಬಹಿಷ್ಕಾರಕ್ಕೆ ಒಳಗಾದವರು ಊರಿನಿಂದ ಆಚೆಗೆ ಹೋಗಬೇಕು. ಕುಟುಂಬದವರು ಯಾರೂ ಸಹ ಅವರನ್ನು ಸಂಪರ್ಕಿಸುವಂತಿಲ್ಲ ಎಂದು ಶಿಕ್ಷೆ ವಿಧಿಸಲಾಗಿತ್ತು. ಇದನ್ನೂ ಓದಿ: ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಯೋಗಿ ಆದಿತ್ಯನಾಥ್