ನವದೆಹಲಿ: ಬೆಂಗಳೂರಿನಲ್ಲಿ (Bengaluru) ಕುಡಿಯುವ ನೀರಿಗಾಗಿ (Drinking Water) ಕಾವೇರಿ (Cauvery) ಜಲಾನಯನ ಪ್ರದೇಶಗಳಿಂದ 24 ಟಿಎಂಸಿ ನೀರು ಮೀಸಲಿಡಲು ಸರ್ಕಾರ ಆದೇಶಿಸಿದ್ದು, ಈ ನೀರಿನ ಬಳಕೆಗೆ ಬೆಂಗಳೂರು ಜಲ ಮಂಡಳಿಗೆ ಅಧಿಕಾರ ನೀಡಿದೆ ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ನವದೆಹಲಿಯಲ್ಲಿ (New Delhi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿಗೆ ಕುಡಿಯುವ ನೀರಿಗಾಗಿ 24 ಟಿಎಂಸಿ ನೀರು ಬಳಕೆಗೆ ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ. ಈ ನೀರಿನ ಬಳಕೆಗೆ ಸರ್ಕಾರ ಈಗ ಆದೇಶಿಸಿದೆ. ಇನ್ಮುಂದೆ ಕಡ್ಡಾಯವಾಗಿ ಈ ನೀರು ಬೆಂಗಳೂರಿಗೆ ಬಳಕೆಯಾಗಲಿದೆ ಎಂದರು. ಇದನ್ನೂ ಓದಿ: ಅಮಿತ್ ಶಾ ರಥಕ್ಕೆ ಕರೆಂಟ್ ಶಾಕ್ – ಅಪಾಯದಿಂದ ಪಾರು
- Advertisement3
ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ ಚರ್ಚೆ ಆರಂಭವಾಗಲಿದೆ. ಶೀಘ್ರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಿದೆ. ಬಳಿಕ ಇದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಬಹುದು. ಈ ಹಿನ್ನೆಲೆ ಕರ್ನಾಟಕ ಹೇಗೆ ತಯಾರಿಯಾಗಬೇಕು ಎನ್ನುವ ಬಗ್ಗೆ ವಕೀಲರ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣ ಕುರಿತು ವಿಲಕ್ಷಣ ಹೇಳಿಕೆ – ನಿತೀಶ್ ಕುಮಾರ್ ಅಸಭ್ಯ ನಾಯಕ ಎಂದ BJP
- Advertisement
ಮೇಕೆದಾಟು ಯೋಜನೆಯಿಂದ ಬರಗಾಲದಲ್ಲಿ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಬರಗಾಲದ ಈ ಸಂದರ್ಭದಲ್ಲಿ ಹೆಚ್ಚು ಒತ್ತು ನೀಡಿ ಈ ಬಗ್ಗೆ ಚರ್ಚಿಸಲಾಗುವುದು. ಸಾಧ್ಯವಾದಷ್ಟು ಬೇಗ ಅನುಮತಿ ನೀಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ನನ್ನಿಂದಲೇ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ: ಮೋದಿ