ಬೆಂಗಳೂರು: ಇಂದು ಒಂದೇ ದಿನ 24 ಮಂದಿಗೆ ಸೋಂಕು ಬಂದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ ಒಂದು ವರ್ಷದ ಮಗುವಿಗೆ ಕೊರೊನಾ ಬಂದಿದೆ.
ಮಂಡ್ಯದಲ್ಲಿ 8, ದಾವಣಗೆರೆಯಲ್ಲಿ 6, ಬೆಳಗಾವಿಯಲ್ಲಿ 3, ಕಲಬುರಗಿಯಲ್ಲಿ 2, ದಕ್ಷಿಣ ಕನ್ನಡದಲ್ಲಿ 2, ಚಿಕ್ಕಬಳ್ಳಾಪುರ, ಕಲಬರುಗಿ ಮತ್ತು ಹುಬ್ಬಳ್ಳಿ- ಧಾರವಾಡದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ. ಪಾದರಾಯನಪುರದಲ್ಲಿ ನಡೆದ ರ್ಯಾಂಡಮ್ ಟೆಸ್ಟ್ ನಲ್ಲೂ ನೆಗೆಟಿವ್ ಬಂದಿದ್ದು, ಇಂದಿನ ಮಟ್ಟಿಗೆ ಬೆಂಗಳೂರಿಗೆ ಸಿಹಿ ಸುದ್ದಿ ಸಿಕ್ಕಿದೆ.
Advertisement
Advertisement
ಇಂದು ಒಟ್ಟು 22 ಮಂದಿ ಬಿಡುಗಡೆಯಾಗಿದ್ದು ಒಟ್ಟು 251 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 8, ವಿಜಪುರದಲ್ಲಿ 5, ಕಲಬುರಗಿಯಲ್ಲಿ 4, ಬಳ್ಳಾರಿಯಲ್ಲಿ 2, ಗದಗ್ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ.
Advertisement
ಸೋಂಕಿತರ ವಿವರ
ರೋಗಿ-566: ಮಂಡ್ಯದ 25 ವರ್ಷದ ಪುರಷ. ಮುಂಬೈ ಪ್ರಯಾಣದ ಹಿನ್ನೆಲೆ
ರೋಗಿ-567: ಮಂಡ್ಯದ 24 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನೆಲೆ.
ರೋಗಿ-568: ಮಂಡ್ಯದ 27 ವರ್ಷದ ಪುರುಷ. ಮುಂಬೈ ಪ್ರಯಾಣದ ಹಿನ್ನೆಲೆ
ರೋಗಿ-569: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ 30 ವರ್ಷದ ಮಹಿಳೆ. ರೋಗಿ 566, 567, 568 ಸಂಪರ್ಕ
Advertisement
ರೋಗಿ-566, ಮಂಡ್ಯದ ಮಳವಳ್ಳಿಯ ಮಹಿಳೆ. 567 ಹಾಗೂ 588ರ ಸಂಪರ್ಕ
ರೋಗಿ-570: ಮಂಡ್ಯ ಜಿಲ್ಲೆ ಮಳವಳ್ಳಿಯ 19 ವರ್ಷದ ಪುರುಷ. ರೋಗಿ-179ರ ಸಂಪರ್ಕ
ರೋಗಿ-571: ಮಂಡ್ಯ ಜಿಲ್ಲೆ ಮಳವಳ್ಳಿಯ 32 ವರ್ಷದ ಮಹಿಳೆ. ರೋಗಿ-179ರ ಸಂಪರ್ಕ
ರೋಗಿ-572: ಮಂಡ್ಯ ಜಿಲ್ಲೆ ಮಳವಳ್ಳಿಯ 13 ವರ್ಷದ ಬಾಲಕ. ರೋಗಿ-179ರ ಸಂಪರ್ಕ
ರೋಗಿ-573: ಮಂಡ್ಯ ಜಿಲ್ಲೆ ಮಳವಳ್ಳಿಯ 12 ವರ್ಷದ ಬಾಲಕ. ರೋಗಿ-179ರ ಸಂಪರ್ಕ
ರೋಗಿ-574: ಬೆಳಗಾವಿ ಜಿಲ್ಲೆ ರಾಯಬಾಗ್ನ 55 ವರ್ಷದ ಪುರುಷ. ರೋಗಿ-301ರ ಸಂಪರ್ಕ
ರೋಗಿ-575: ಬೆಳಗಾವಿ ಜಿಲ್ಲೆ ರಾಯಬಾಗ್ನ 30 ವರ್ಷದ ಮಹಿಳೆ. ರೋಗಿ-301ರ ಸಂಪರ್ಕ
ರೋಗಿ-576: ಬೆಳಗಾವಿ ಜಿಲ್ಲೆ ರಾಯಬಾಗ್ನ 50 ವರ್ಷದ ಪುರುಷ. ರೋಗಿ-301ರ ಸಂಪರ್ಕ
ರೋಗಿ – 577: ವಿಜಯಪುರದ 54 ವರ್ಷದ ವ್ಯಕ್ತಿ, ರೋಗಿ 510ರ ಸಂಪರ್ಕ
ರೋಗಿ – 578: ದಕ್ಷಿಣ ಕನ್ನಡದ ಬಂಟ್ವಾಳದ 69 ವರ್ಷದ ವ್ಯಕ್ತಿ. ರೋಗಿ 390ರ ದ್ವಿತೀಯ ಸಂಪರ್ಕ
ರೋಗಿ – 579 : ದಕ್ಷಿಣ ಕನ್ನಡ ಜಿಲ್ಲೆ 62 ವರ್ಷದ ವ್ಯಕ್ತಿ: ರೋಗಿ 536ರ ಸಂಪರ್ಕ
ರೋಗಿ-580: ದಾವಣಗೆರೆಯ 31 ವರ್ಷದ ಮಹಿಳೆ. ರೋಗಿ 556 ಸಂಪರ್ಕ
ರೋಗಿ-581: ದಾವಣಗೆರೆ 26 ವರ್ಷದ ಮಹಿಳೆ. ರೋಗಿ 556 ಸಂಪರ್ಕ
ರೋಗಿ -582: ದಾವಣಗೆರೆಯ 34 ವರ್ಷದ ವ್ಯಕ್ತಿ. ರೋಗಿ 556 ಸಂಪರ್ಕ
ರೋಗಿ -583: ದಾವಣಗೆರೆಯ 1 ವರ್ಷದ ಗಂಡು ಮಗು. ರೋಗಿ 556 ಸಂಪರ್ಕ
ರೋಗಿ-584: ದಾವಣಗೆರೆಯ 18 ವರ್ಷದ ಯುವತಿ: ರೋಗಿ 556ರ ಸಂಪರ್ಕ
ರೋಗಿ -585: ದಾವಣಗೆರೆಯ 16 ವರ್ಷ ಬಾಲಕ. ರೋಗಿ 556ರ ಸಂಪರ್ಕ
ರೋಗಿ- 586: ಚಿಕ್ಕಬಳ್ಳಾಪುರದ 40 ವರ್ಷ ಮಹಿಳೆ. ರೋಗಿ 250ರ ಸಂಪರ್ಕ
ರೋಗಿ -587: ಕಲಬುರಗಿಯ 56 ವರ್ಷದ ವ್ಯಕ್ತಿ. ಉಸಿರಾಟದ ಮಸ್ಯೆ
ರೋಗಿ-588 :ಕಲಬುರಗಿಯ 20 ವರ್ಷದ ಯುವತಿ. ರೋಗಿ 425ರ ಸಂಪರ್ಕ
ರೋಗಿ -589: ಹುಬ್ಬಳ್ಳಿ ಧಾರವಾಡದ 57 ವರ್ಷದ ವ್ಯಕ್ತಿ. ಐಎಲ್ಐ ಸಮಸ್ಯೆ