ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನ (Karnataka Congress) ಸಿದ್ದರಾಮಯ್ಯ (Siddaramaiah) ಸರ್ಕಾರ ಅಧಿಕಾರಕ್ಕೆ ಬಂದು ವಾರ ಕಳೆದಿದ್ದು, ಶನಿವಾರ ಸಂಪುಟದ (Cabinet) 24 ನೂತನ ಸಚಿವರು (Ministers ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶನಿವಾರ ಬೆಳಗ್ಗೆ 11:45ರ ವೇಳೆಗೆ ರಾಜಭವನದ ಗಾಜಿನ ಮನೆಯಲ್ಲಿ 24 ಸಚಿವರಿಗೆ ರಾಜ್ಯದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಘೋಷಿಸಿದ್ದಾರೆ.
Advertisement
Advertisement
ನೂತನ ಸಚಿವರು:
ಶಿವಾನಂದ ಪಾಟೀಲ್ – ಲಿಂಗಾಯತ (ಬಸವನಬಾಗೇವಾಡಿ), ಎನ್ಎಸ್ ಮಲ್ಲಿಕಾರ್ಜುನ್- ಲಿಂಗಾಯತ (ದಾವಣಗೆರೆ ಉತ್ತರ), ಹೆಚ್.ಕೆ.ಪಾಟೀಲ್ – ರೆಡ್ಡಿ ಲಿಂಗಾಯತ (ಗದಗ), ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ – ಒಕ್ಕಲಿಗ (ಬ್ಯಾಟರಾಯನಪುರ), ಚಲುವರಾಯ ಸ್ವಾಮಿ – ಒಕ್ಕಲಿಗ (ನಾಗಮಂಗಲ), ಕೆ. ವೆಂಕಟೇಶ್ – ಒಕ್ಕಲಿಗ (ಪಿರಿಯಾಪಟ್ಟಣ), ಎಚ್ಸಿ ಮಹದೇವಪ್ಪ – ಎಸ್ಸಿ – ಬಲಗೈ (ಟಿ.ನರಸೀಪುರ), ಈಶ್ವರ್ ಖಂಡ್ರೆ – ಲಿಂಗಾಯತ (ಭಾಲ್ಕಿ), ಕೆ.ಎನ್ ರಾಜಣ್ಣ- ಎಸ್ಟಿ (ಮಧುಗಿರಿ), ಶರಣ ಬಸಪ್ಪ ದರ್ಶನಾಪೂರ್, ಆರ್. ಬಿ ತಿಮ್ಮಾಪೂರ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್- ಲಿಂಗಾಯತ (ಸೇಡಂ), ಮಂಕಾಳ ವೈದ್ಯ – ಮೊಗವೀರ ( ಭಟ್ಕಳ), ಲಕ್ಷ್ಮಿ ಹೆಬ್ಬಾಳ್ಕರ್ – ಲಿಂಗಾಯತ (ಬೆಳಗಾವಿ ಗ್ರಾ.), ರಹೀಂ ಖಾನ್ – ಮುಸ್ಲಿಂ (ಬೀದರ್ ಉತ್ತರ), ಎಂ.ಸಿ ಸುಧಾಕರ್ – ಒಕ್ಕಲಿಗ (ಚಿಂತಾಮಣಿ), ಡಿ ಸುಧಾಕರ್, ಸಂತೋಷ್ ಲಾಡ್ – ಮರಾಠ (ಕಲಘಟಗಿ), ಬೋಸರಾಜು – ಕ್ಷತ್ರೀಯ (ಮಾಜಿ ಎಂಎಲ್ಸಿ), ಬೈರತಿ ಸುರೇಶ್ – ಕುರುಬ (ಹೆಬ್ಬಾಳ), ಮಧು ಬಂಗಾರಪ್ಪ – ಈಡಿಗ (ಸೊರಬ) ಹಾಗೂ ಬಿ. ನಾಗೇಂದ್ರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಅಂತಿಮಗೊಂಡ ಸಚಿವರ ಪಟ್ಟಿ – ಯಾವ ಜಿಲ್ಲೆಗೆ ಎಷ್ಟು ಮಂತ್ರಿಗಿರಿ?
Advertisement
Advertisement
ಸಂಪುಟದ ಎಲ್ಲ 34 ಸ್ಥಾನಗಳು ಭರ್ತಿಯಾಗಿದ್ದು, ಸಂಪುಟದಲ್ಲಿ 22 ಜಿಲ್ಲೆಗಳಿಗೆ ಮಂತ್ರಿ ಭಾಗ್ಯ ದೊರಕಿದೆ. 9 ಜಿಲ್ಲೆಗಳಿಗೆ ಸಂಪುಟದಲ್ಲಿ ಯಾವುದೇ ಸ್ಥಾನ ನೀಡಲಾಗಿಲ್ಲ. ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೋಲಾರ, ವಿಜಯನಗರ, ಹಾವೇರಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 22 ಜಿಲ್ಲೆಗಳಿಗೆ ಮಂತ್ರಿ ಸ್ಥಾನಗಳು ದೊರೆತಿವೆ. ಇದನ್ನೂ ಓದಿ: ಸಿದ್ದು ಸಂಪುಟದಲ್ಲಿ ಹಲವರಿಗೆ ಸಚಿವ ಸ್ಥಾನ ಮಿಸ್