ಭುವನೇಶ್ವರ: ದೇಶೀ ಮದ್ಯವನ್ನು (Country Liquor) ಕುಡಿದ ಬರೋಬ್ಬರಿ 24 ಕಾಡಾನೆಗಳು (Elephant) ಗಂಟೆಗಟ್ಟಲೆ ನಿದ್ರೆಗೆ ಜಾರಿರುವ ಘಟನೆ ಒಡಿಶಾದಲ್ಲಿ (Odisha) ನಡೆದಿದೆ. ಅವುಗಳನ್ನು ಎಬ್ಬಿಸಲು ಅರಣ್ಯಾಧಿಕಾರಿಗಳು ಡೋಲನ್ನೇ ಬಾರಿಸಿದ್ದಾರೆ.
ಹೌದು, ಒಡಿಶಾದ ಕಿಯೋಂಜಾರ್ ಜಿಲ್ಲೆಯ ಶಿಲಿಪಾಡಾ ಗೋಡಂಬಿ ಅರಣ್ಯದಲ್ಲಿ ಈ ಘಟನೆ ನಡೆದಿದೆ. ಸುಮಾರು 24 ಆನೆಗಳು ಸಾಂಪ್ರದಾಯಿಕ ಹಳ್ಳಿಗಾಡಿನ ಮದ್ಯವಾದ ‘ಮಹುವಾ’ವನ್ನು (Mahua) ಕುಡಿದಿವೆ. ಸಮೀಪದ ಹಳ್ಳಿಯ ಜನರು ಮದ್ಯ ತಯಾರಿಸಲು ಕಾಡಿನ ಬಳಿ ಹೋದಾಗ ಅಮಲೇರಿದ ಆನೆಗಳು ಗುಂಪಾಗಿ ಗಾಢ ನಿದ್ರೆಗೆ ಜಾರಿರುವುದು ತಿಳಿದುಬಂದಿದೆ.
Advertisement
Advertisement
ಘಟನೆಯ ಬಗ್ಗೆ ವಿವರಿಸಿದ ಗ್ರಾಮಸ್ಥರು, ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋದೆವು. ಆದರೆ ನಾವು ಮದ್ಯವನ್ನು ಶೇಖರಿಸಿಟ್ಟಿದ್ದ ಎಲ್ಲಾ ಮಡಕೆಗಳು ಒಡೆದು ಹೋಗಿದ್ದು, ಅದರಲ್ಲಿದ್ದ ಮದ್ಯ ಖಾಲಿಯಾಗಿತ್ತು. ಬಳಿಕ ಹತ್ತಿರದಲ್ಲೇ ಆನೆಗಳ ಹಿಂಡು ಮಲಗಿದ್ದುದು ಕಂಡುಬಂದಿದೆ. ಅವುಗಳೇ ಎಲ್ಲಾ ಮದ್ಯವನ್ನು ಖಾಲಿ ಮಾಡಿರುವುದು ತಿಳಿದುಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ವೀರ್ ದಾಸ್ ಹಾಸ್ಯ ಕಾರ್ಯಕ್ರಮ ರದ್ದು
Advertisement
ಆ ಮದ್ಯವನ್ನು ಸಂಸ್ಕರಿಸಿರಲಿಲ್ಲ. ಹೀಗಾಗಿ ನಾವು ಆನೆಗಳನ್ನು ಎಬ್ಬಿಸಲು ಪ್ರಯತ್ನಿಸಿದೆವು. ಆದರೆ ಅದು ಸಾಧ್ಯವಾಗಿಲ್ಲ. ಬಳಿಕ ಅರಣ್ಯ ಇಲಾಖೆಗೆ ತಿಳಿಸಿದೆವು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಎಬ್ಬಿಸಲು ಡೋಲು ಬಾರಿಸಬೇಕಾಯಿತು. ಬಳಿಕ ಆನೆಗಳು ಎದ್ದು, ಕಾಡಿನೊಳಗೆ ಹೋದವು ಎಂದು ಹೇಳಿದ್ದಾರೆ.
Advertisement
ಆನೆಗಳು ಅಮಲು ಪದಾರ್ಥವನ್ನು ಸೇವಿಸಿದ್ದವೇ ಎಂಬುದು ಖಚಿತವಾಗಿಲ್ಲ. ಅವುಗಳು ವಿಶ್ರಾಂತಿಯನ್ನೂ ತೆಗೆದುಕೊಳ್ಳುತ್ತಿದ್ದ ಸಾಧ್ಯತೆಯಿದೆ. ಹಳ್ಳಿಯ ಜನರು ಇಂತಹ ಮಾಹಿತಿ ನೀಡಿರುವ ಹಿನ್ನೆಲೆ ನಾವು ಸ್ಥಳಕ್ಕಾಗಮಿಸಿದೆವು ಎಂದು ಅರಣ್ಯ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರ ತಿಳಿಸಿದರು. ಇದನ್ನೂ ಓದಿ: ಅಫ್ಘನ್‍ನಲ್ಲಿ ಅಮ್ಯೂಸ್‍ಮೆಂಟ್ ಪಾರ್ಕ್‍ಗೆ ಹೋಗಲು ಮಹಿಳೆಯರಿಗೆ ಇನ್ಮುಂದೆ ಅವಕಾಶವಿಲ್ಲ