ಲಕ್ಕಿ ಬಾಸ್ಕರ್ ಸಿನಿಮಾ ಸ್ಟೈಲ್‌ನಲ್ಲಿ 24 ಕೋಟಿ ವಂಚನೆ – ಸಿಸಿಬಿ ತನಿಖೆ ವೇಳೆ ಬಟಾಬಯಲು

Public TV
1 Min Read
Money

ಬೆಂಗಳೂರು: ಲಕ್ಕಿ ಬಾಸ್ಕರ್ (Lucky Bhaskhar) ಸಿನಿಮಾ ಸ್ಟೈಲ್‌ನಲ್ಲಿ 24 ಕೋಟಿ ರೂ. ವಂಚನೆ ಮಾಡಿರುವ ಘಟನೆಯೊಂದು ಸಿಸಿಬಿ ಅಧಿಕಾರಿಗಳ ತನಿಖೆ ವೇಳೆ ಬೆಳಕಿಗೆ ಬಂದಿದೆ.

ವಂಚಕಿ ರೇಖಾ ದಂಪತಿ, ಆರೋಪಿ ಚೇತನ್ ಎಂಬ ಆಡಿಟರ್‌ನ ಜೊತೆಯಲ್ಲಿ ಸೇರಿಕೊಂಡು ಹಲವರಿಗೆ ಆಮಿಷವೊಡ್ಡಿ ವಂಚನೆ ಮಾಡಿದ್ದಾರೆ. ತನಿಖೆ ವೇಳೆ 14 ಬೇರೆ ಬೇರೆ ಬ್ಯಾಂಕ್ ಅಕೌಂಟ್‌ನಿಂದ 24 ಕೋಟಿ ರೂ. ಹಣ ವಹಿವಾಟು ಆಗಿರುವುದು ಪತ್ತೆಯಾಗಿದೆ.ಇದನ್ನೂ ಓದಿ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ

ಲಕ್ಕಿ ಬಾಸ್ಕರ್ ಸಿನಿಮಾದಲ್ಲಿ ನಟ ದುಲ್ಕರ್‌ ಸಲ್ಮಾನ್‌ ಹೇಗೆ ಬ್ಯಾಂಕ್ ಹಣ ಬಳಸಿಕೊಂಡು ಲಾಟರಿಯಲ್ಲಿ ಬರುವ ಹಣವನ್ನ ಬ್ಯಾಂಕ್‌ಗೆ ಜಮೆ ಮಾಡಿ ಲಾಭ ಮಾಡಿಕೊಳ್ಳುತ್ತಾನೆ. ಹಾಗೆಯೇ ಆರೋಪಿ ರೇಖಾ ದಂಪತಿ ಲಾಟರಿ ಹೆಸರಿನಲ್ಲಿ ಬಂದ ಹಣವನ್ನು 14 ಬೇರೆ ಬೇರೆ ಅಕೌಂಟ್‌ಗಳಿಗೆ ಹಾಕಿ ಲಾಭ ಪಡೆದುಕೊಂಡಿದ್ದಾರೆ. ಇನ್ನೂ ರೇಖಾ ದಂಪತಿ ಕಂಪನಿಯಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿರೋದಾಗಿ ತಿಳಿಸಿ ಚೇತನ್ ಹಲವರಿಗೆ ಅಪ್ರೋಚ್ ಮಾಡಿ ಹಣ ಪಡೆದು ಪಂಗನಾಮ ಹಾಕಿದ್ದಾನೆ.

ಉಳಿದಂತೆ ಆರೋಪಿಗಳ ವಿರುದ್ಧ ಮತ್ತಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಿಸಲು ಹಲವರು ಬರುತ್ತಿರುವುದಾಗಿ ತಿಳಿದು ಬಂದಿದೆ. ಸದ್ಯ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ:ಬಿಹಾರ ಬಜೆಟ್ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಪ್ರಿಯಾಂಕ್ ಖರ್ಗೆ

 

Share This Article