ರಾಯ್‍ಪುರ: 12 ಮಹಿಳೆಯರು ಸೇರಿ 24 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗಣರಾಜ್ಯೋತ್ಸದ ದಿನ ದಕ್ಷೀಣ ಬಸ್ತಾರ್ ಪ್ರಾಂತ್ಯದಲ್ಲಿ ನಕ್ಸಲರು ಶರಣಾಗಿದ್ದಾರೆ. ತಾವು ಮಾವೋವಾದಿಗಳ ತತ್ವಗಳಿಂದ ಬೇಸರಗೊಂಡು ಶರಣಾಗಿದ್ದೇವೆ. ಅಲ್ಲದೇ ಲೋನ್ ವರೋತ್ತು(ಮರಳಿ ಮನೆಗೆ) ಅಭಿಯಾನ ನಮ್ಮನ್ನು ಹಿಂಸೆಯನ್ನು ತೊರೆಯುವಂತೆ ಪ್ರೇರೆಪಿಸಿತು ಎಂದು ನಕ್ಸಲರು ಹೇಳಿದ್ದಾರೆ.
Advertisement
Advertisement
1600 ಮಂದಿ ನಕ್ಸಲರ ಪತ್ತೆಗೆ ಸರ್ಕಾರ ನಗದು ಬಹುಮಾನವನ್ನು ಘೋಷಿಸಿದೆ. ಈ ಪೈಕಿ ನಕ್ಸಲ್ ತೊರೆದು ಬಂದವರಿಗೆ ಸರ್ಕಾರ ಕೌಶಲ್ಯ ಅಭಿವೃದ್ಧಿಯನ್ನು ಕಲಿಸಲಿದೆಎಂದು ದಾಂತೇವಾಡದ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.
Advertisement
Advertisement
ಸದ್ಯ ಅವರಿಗೆ ತಲಾ 10 ಲಕ್ಷ ರೂ. ನೆರವು ನೀಡಲಾಗುತ್ತದೆ. ಮುಂದೆ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯ ಅಡಿಯಲ್ಲಿ ಹೆಚ್ಚಿನ ನೆರವು ದೊರೆಯುತ್ತದೆ. ದಾಂತೇವಾಡದಲ್ಲಿ ಈವರೆಗೆ 272 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಹೇಳಿದ್ದಾರೆ.