-ಒಂದೇ ದಿನ ಕೊರೊನಾ 294 ಮಂದಿ ಬಲಿ
-ಇಟಲಿಯನ್ನ ಹಿಂದಿಕ್ಕಿದ ಭಾರತ
ನವದೆಹಲಿ: ಕಳೆದ 24 ಗಂಟೆಯಲ್ಲಿ 9887 ಹೊಸ ಕೋವಿಡ್-19 ಪಕ್ರರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಭಾರತದಲ್ಲಿ 294 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ.
ದೇಶದಲ್ಲಿ ಒಟ್ಟು 2,36,657 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದಲ್ಲಿ 1,15,942 ಸಕ್ರಿಯ ಪ್ರಕರಣಗಳಿದ್ದು, 1,14,073 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಇದುವರೆಗೂ 6642 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಭಾರತ ಇಟಲಿಯನ್ನು ಕೊರೊನಾ ಓಟದಲ್ಲಿ ಹಿಂದಿಕ್ಕಿ ವಿಶ್ವದ ಕೋವಿಡ್ ಪೀಡಿತ ಟಾಪ್ 10 ದೇಶಗಳಲ್ಲಿ 6ನೇ ಸ್ಥಾನದಲ್ಲಿದೆ.
This is the highest single-day spike in the number of #COVID19 cases (9887) & deaths (294) in India. https://t.co/aTsdhQFFO4
— ANI (@ANI) June 6, 2020
ಇಟಲಿಯಲ್ಲಿ ಇದುವರೆಗೂ 2,34,531 ಕೊರೊನಾ ಪ್ರಕರಣಗಳು ದಾಖಲಾಗಿವೆ. ಅಮೆರಿಕಾ, ಬ್ರೆಜಿಲ್, ರಷ್ಯಾ, ಸ್ಪೇನ್ ಮತ್ತು ಬ್ರಿಟನ್ ಕೊರೊನಾ ಪೀಡಿತ ಟಾಪ್ 5 ದೇಶಗಳಾಗಿವೆ.