ನವದೆಹಲಿ: ಕಳೆದ 24 ಗಂಟೆಯಲ್ಲಿ 92,071 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 48,46,427ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 1,136 ಸೋಂಕಿತರು ಸಾವನ್ನಪ್ಪಿದ್ದು, 9,86,598 ಸಕ್ರಿಯ ಪ್ರಕರಣಗಳಿವೆ.
ಒಂದೇ ದಿನ 77,512 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ದೇಶದಲ್ಲಿ ಗುಣಮುಖ ಪ್ರಮಾಣ ಶೇ.78 ರಷ್ಟಿದೆ. ಐದು ರಾಜ್ಯಗಳಲ್ಲಿಯೇ ಶೇ.60 ರಷ್ಟು ಸಕ್ರಿಯ ಪ್ರಕರಣಗಳಿವೆ. ಸೆಪ್ಟೆಂಬರ್ 13ರಂದು 9,78,500 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಇದುವರೆಗೂ 5,72,39,428 ಜನರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ.
Advertisement
77,512 recoveries registered in last 24 hours in India taking the total number of recoveries to 37,80,107 & recovery rate to 78%. More than 60% of active cases are concentrated in 5 States- Maharashtra, Karnataka, Andhra Pradesh, Uttar Pradesh & Tamil Nadu: Health Ministry #COVID
— ANI (@ANI) September 14, 2020
Advertisement
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 22,543 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,60,308ಕ್ಕೆ ಏರಿಕೆಯಾಗಿದೆ. ಉಳಿದಂತೆ ಆಂಧ್ರ ಪ್ರದೇಶ 9,536, ತಮಿಳುನಾಡು 5,693, ಕರ್ನಾಟಕ 9,894, ಉತ್ತರ ಪ್ರದೇಶ 6,205 ಪ್ರಕರಣಗಳು ವರದಿಯಾಗಿವೆ.
Advertisement