ನವದೆಹಲಿ: ಕೊರೊನಾ ತನ್ನ ರೌದ್ರನರ್ತನ ಮುಂದುವರಿಸಿದ್ದು ಕಳೆದ 24 ಗಂಟೆಯಲ್ಲಿ 69,878 ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ 945 ಜನರು ಕೊರೊನಾ ಬಲಿ ಪಡೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 55,794ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,75,702ಕ್ಕೆ ಏರಿಕೆ ಕಂಡಿದ್ದು, 6,97,330 ಸಕ್ರಿಯ ಪ್ರಕರಣಗಳಿವೆ. ಇನ್ನು ಗುಣಮುಖ ಪ್ರಮಾಣ ಶೇ.74.69ರಷ್ಟಿರೋದು ಸಮಾಧಾನಕರ ವಿಷಯ. ಶುಕ್ರವಾರ 10.23,836 ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ.
Spike of 69,878 cases and 945 deaths reported in India, in the last 24 hours.
The #COVID19 tally in the country rises to 29,75,702 including 6,97,330 active cases, 22,22,578 cured/discharged/migrated & 55,794 deaths: Ministry of Health and Family Welfare pic.twitter.com/a9QR8C0OUg
— ANI (@ANI) August 22, 2020
ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮರಿಕ ಮತ್ತು ಬ್ರೆಜಿಲ್ ಮೊದಲು ಮತ್ತು ಎರಡನೇ ಸ್ಥಾನದಲ್ಲಿವೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳು ದೇಶದಲ್ಲಿ ಕೊರೊನಾ ಸಂಖ್ಯೆಯಲ್ಲಿ ಮೊದಲ ಐದು ಸ್ಥಾನದಲ್ಲಿವೆ.
COVID-19 Testing Update . For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/uJeWpo7VBb
— ICMR (@ICMRDELHI) August 22, 2020
ಕೊರೊನಾ ನಿಯಂತ್ರಣಕ್ಕಾಗಿ ಹರ್ಯಾಣ ವೀಕೆಂಡ್ ಲಾಕ್‍ಡೌನ್ ಘೋಷನೆ ಮಾಡಿದೆ. ಮೂಲಭೂತ ಸೇವೆಗಳು ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳು ವೀಕೆಂಡ್ ಕರ್ಫ್ಯೂನಲ್ಲಿ ಬಂದ್ ಆಗಲಿದೆ. ಪಂಜಾಬ್ ಸರ್ಕಾರ ರಾಜ್ಯದ 167 ನಗರಗಳಲ್ಲಿ ಶುಕ್ರವಾರದಿಂದಲೇ ನೈಟ್ ಕರ್ಪ್ಯೂ ವಿಧಿಸಿದೆ. ಸಂಜೆ 7 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರಗೆ ಪಂಜಾಬ್ ನಲ್ಲಿ ನೈಟ್ ಕರ್ಫ್ಯೂ ಇರಲಿದೆ.