– ಸಾಮಾಜಿಕ ಜಾಲತಾಣ, ಒಟಿಟಿ ವೇದಿಕೆಗಳಿಗೆ ನಿಯಮ
– ಕಂಪನಿಗಳು 72 ಗಂಟೆಯ ಒಳಗಡೆ ಮಾಹಿತಿ ನೀಡಬೇಕು
ನವದೆಹಲಿ: ಇನ್ನು ಮುಂದೆ ಆಕ್ಷೇಪಾರ್ಹ ಫೋಟೋ, ವಿಷಯ, ವಿಡಿಯೋಗಳನ್ನು ದೂರು ನೀಡಿದ 24 ಗಂಟೆಯ ಒಳಗಡೆ ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ವೇದಿಕೆಗಳು ತೆಗೆಯಬೇಕೆಂದು ಕೇಂದ್ರ ಸರ್ಕಾರ ಖಡಕ್ ಆಗಿ ಸೂಚಿಸಿದೆ.
ಡಿಜಿಟಲ್ ಮೀಡಿಯಾದಲ್ಲಿ ದ್ವೇಷ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಜಾರಿಗೆ ತರಲಾದ ಹೊಸ ನಿಯಮಗಳನ್ನು ತಿಳಿಸಿದರು.
Advertisement
Advertisement
ಡಿಜಿಟಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ದ್ವೇಷ ಭಾಷಣಗಳನ್ನು ಹರಡಲಾಗುತ್ತದೆ. ಇವುಗಳನ್ನು ನಿಯಂತ್ರಿಸಬೇಕೆಂದು ಜನರಿಂದ ಆಗ್ರಹ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಈಗ ನಿಯಮ ರೂಪಿಸಿದೆ.
Advertisement
ನಿಯಮದಲ್ಲಿ ಏನಿದೆ?
ಅಶ್ಲೀಲ, ಮಾನಹಾನಿಕರ, ಆಕ್ಷೇಪಾರ್ಹ, ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದ ವಿಷಯ, ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ ಮತ್ತು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರುವ ವಿಷಯಗಳನ್ನು ನಿಷೇಧಿಸಬೇಕು.
Advertisement
ಸಾಮಾಜಿಕ ಜಾಲತಾಣಗಳು ಸೂಚನೆ ನೀಡಿದ ಅಥವಾ ಕೋರ್ಟ್ ಆದೇಶದ 36 ಗಂಟೆಯ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.
????LIVE Now
Press Conference by Union Ministers @PrakashJavdekar and @rsprasad at National Media Centre, #NewDelhi
Watch on #PIB's
YouTube: https://t.co/6RyOF1ewVs
Facebook: https://t.co/p9g0J6q6qvhttps://t.co/v0S3L5sgtC
— PIB India (@PIB_India) February 25, 2021
ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಸೈಟ್‌ಗಳು ಮಾಹಿತಿಯನ್ನು ಮೊದಲ ಹಾಕಿದವರ ಟ್ರ್ಯಾಕಿಂಗ್ ಮಾಡಬೇಕು.
ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಕಂಪನಿಗಳು 72 ಗಂಟೆಯ ಒಳಗಡೆ ಮಾಹಿತಿಯನ್ನು ಒದಗಿಸಬೇಕು.
ದೂರು ನೀಡಿದ 24 ಗಂಟೆಗಳ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.
The government welcomes criticism and right to dissent but it is very important for the users of social media to have a forum to raise their grievance against the misuse of social media: Union Minister @rsprasad #ResponsibleFreedom #OTTGuidelines pic.twitter.com/nsowrwbzt0
— PIB India (@PIB_India) February 25, 2021
ದೂರುಗಳನ್ನು ಸ್ವೀಕರಿಸಲು, ಅಂಗೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕಂಪನಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು.
ನಿಯಮವನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ ಜಾರಿಯಾಗಬೇಕು. ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ, ಸರ್ಕಾರದ ಮೇಲ್ವಿಚಾರಣೆ. ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯ ಕುರಿತು ಸಾರ್ವಜನಿಕರಿಂದ ಎಲ್ಲ ಕುಂದುಕೊರತೆಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಆನ್‌ಲೈನ್ ಪೋರ್ಟಲ್ ತೆರೆಯಬೇಕು. ಕುಂದುಕೊರತೆಯನ್ನು 15 ದಿನಗಳ ಒಳಗಡೆ ಪರಿಹರಿಸಬೇಕು.
We have decided to have 3 tier mechanism for OTT platforms;
▪️OTT and Digital news media have to disclosed their details
▪️Grievance redressal system for Digital and OTT platforms
▪️Self regulatory body headed by retired SC or HC judge
Union Minister @PrakashJavdekar pic.twitter.com/6QdCK44yxA
— PIB India (@PIB_India) February 25, 2021
ಈ ಸೇವೆ ನೀಡುವ ಟೆಕ್ ಕಂಪನಿಗಳು ಕುಂದುಕೊರತೆಯನ್ನು ನಿವಾರಿಸಲು ಅಧಿಕಾರಿಗಳನ್ನು ನೇಮಿಸಬೇಕು.
ಕುಂದುಕೊರತೆಯನ್ನು ನಿವಾರಿಸುವ ಅಧಿಕಾರಿ ಭಾರತದಲ್ಲಿ ವಾಸಿಸಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ವರದಿ ನೀಡಬೇಕು.
The social media platforms upon being asked either by the court or by the Govt. authority will be required to disclose the first originator of the mischievous tweet or a message: Union Minister @rsprasad#ResponsibleFreedom #OTTGuidelines pic.twitter.com/qU9A197bah
— PIB India (@PIB_India) February 25, 2021