– 4.50 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ದೇಶದ ದಾಖಲೆಯ 15,968 ಮಂದಿಗೆ ಕೊರೊನಾವೈರಸ್ ಪಾಸಿಟಿವ್ ವರದಿಯಾಗಿದೆ.
ಆರು ತಿಂಗಳ ಹಿಂದೆ ಚೀನಾದ ವುಹಾನ್ನಿಂದ ಶುರುವಾದ ಮಾರಣಾಂತಿಕ ಕೋವಿಡ್-19 ವೈರಸ್ಗೆ ಇನ್ನೂ ಔಷಧಿ ಸಿಕ್ಕಿಲ್ಲ. ಹೀಗಾಗಿ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಏರಿಕೆ ಕಾಣುತ್ತಿದೆ.
Advertisement
Advertisement
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇಂದಿನ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ 15,968 ಮಂದಿಗೆ ಸೋಂಕು ದೃಢವಾಗಿದ್ದು, 465 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 4.50 ಲಕ್ಷ ಗಡಿ ದಾಟಿದೆ.
Advertisement
ದೇಶದಲ್ಲಿ ಈವರೆಗೆ ಒಟ್ಟು 4,56,183 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಪೈಕಿ 1,83,022 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2,58,685 ಜನ ಗುಣಮುಖರಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ 14,476 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.
Advertisement
465 deaths and highest single-day spike of 15968 new #COVID19 positive cases reported in India in last 24 hrs.
Positive cases in India stand at 456183 including 183022 active cases, 258685 cured/discharged/migrated & 14476 deaths: Ministry of Health pic.twitter.com/ubjIQ9ThvW
— ANI (@ANI) June 24, 2020
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶಾದ್ಯಂತ ನಾಲ್ಕು ಹಂತದ ಲಾಕ್ಡೌನ್ ನಂತರ ಅನ್ಲಾಕ್ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಮತ್ತೆ ಲಾಕ್ಡೌನ್ ಆಗುವ ಲಕ್ಷಣಗಳಿಲ್ಲ ಎನ್ನಲಾಗುತ್ತಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಐಬಿಎಂಆರ್) ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, ಕಳೆದ ತಿಂಗಳು ಜೂನ್-ಜುಲೈನಲ್ಲಿ ಏಕಾಏಕಿ ಭಾರತ ಉತ್ತುಂಗಕ್ಕೇರಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಪ್ರಕರಣಗಳ ಏರಿಕೆಯನ್ನು ಗಮನಿಸಿದರೆ ದೇಶದಲ್ಲಿ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಮತ್ತಷ್ಟು ಜನರಿಗೆ ಸೋಂಕು ಹರಡುವ ಆತಂಕ ಸೃಷ್ಟಿಯಾಗಿದೆ.