ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 238 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 3 ಮರಣ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 8ಕ್ಕೆ ಏರಿದೆ.
ರಾಜ್ಯದಲ್ಲಿ ಒಟ್ಟು 317 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,076 ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 30,01,792 ಮಂದಿಗೆ ಕೊರೊನಾ ಬಂದಿದೆ. 29,56,405 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ದಾಖಲಾದ ಮೂರು ಮರಣ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 2 ಮತ್ತು ಮೈಸೂರಿನಲ್ಲಿ 1 ಪ್ರಕರಣ ದಾಖಲಾಗಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.26 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.20 ರಷ್ಟಿದೆ. ಇದನ್ನೂ ಓದಿ: ಭಾರತದಲ್ಲಿ ಓಮಿಕ್ರಾನ್ ಸೆಂಚುರಿ – 101 ಮಂದಿಗೆ ಸೋಂಕು
ರಾಜ್ಯದಲ್ಲಿ ಇಂದು ಒಟ್ಟು 3,44,980 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,17,058 ಸ್ಯಾಂಪಲ್ (ಆರ್ಟಿಪಿಸಿಆರ್ 96,569 + 20,489 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಎಸ್ಕೇಪ್
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 153, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 2, ಚಿತ್ರದುರ್ಗ 0, ದಕ್ಷಿಣ ಕನ್ನಡ 19, ದಾವಣಗೆರೆ 1, ಧಾರವಾಡ 3, ಗದಗ 0, ಹಾಸನ 1, ಹಾವೇರಿ 0, ಕಲಬುರಗಿ 0, ಕೊಡಗು 13, ಕೋಲಾರ 2, ಕೊಪ್ಪಳ 1, ಮಂಡ್ಯ 3, ಮೈಸೂರು 15, ರಾಯಚೂರು 0, ರಾಮನಗರ 0, ಶಿವಮೊಗ್ಗ 4, ತುಮಕೂರು 6, ಉಡುಪಿ 5, ಉತ್ತರ ಕನ್ನಡ 4, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.