ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಗೆ ಇಡೀ ವಿಶ್ವವೇ ಆತಂಕ್ಕೀಡಾಗಿದೆ. ಈ ಮಧ್ಯೆ ಇರಾನ್ ನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಅಲ್ಲಿ ಸಿಲುಕಿದ್ದ 234 ಮಂದಿ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು 103 ಯಾತ್ರಿಕರು, 131 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 234 ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ ಎಂದಿದ್ದಾರೆ. ಅಲ್ಲದೇ ರಾಯಭಾರಿ ಧಾಮು ಗದ್ದಾಮ್ ಹಾಗೂ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇರಾನ್ ಅಧಿಕಾರಿಗಳ ತಂಡಕ್ಕೆ ಜೈಶಂಕರ್ ಧನ್ಯವಾದ ತಿಳಿಸಿದ್ದಾರೆ.
234 Indians stranded in #Iran have arrived in India; including 131 students and 103 pilgrims.
Thank you Ambassador @dhamugaddam and @India_in_Iran team for your efforts. Thank Iranian authorities.
— Dr. S. Jaishankar (@DrSJaishankar) March 14, 2020
ಮೊದಲ ಬ್ಯಾಚ್ ನ 58 ಮಂದಿ ಭಾರತೀಯ ಯಾತ್ರಿಕರನ್ನು ಮಂಗಳವಾರ ಇರಾನ್ ನಿಂದ ಕರೆತರಲಾಯಿತು. ಎರಡನೇ ಬ್ಯಾಚ್‍ನ 44 ಮಂದಿ ಯಾತ್ರಿಕರು ಶುಕ್ರವಾರ ಬಂದಿದ್ದಾರೆ. ಶನಿವಾರ ಮುಂಜಾನೆ ಮೂರನೇ ಬಾಚಿನ ಭಾರತೀಯರು ಇರಾನ್ ನಿಂದ ಬಂದಿಳಿದಿದ್ದಾರೆ.
ಸದ್ಯ ಇರಾನ್ ನಲ್ಲಿ ಕೊರೊನಾ ಭೀಕರತೆ ಹೆಚ್ಚಾಗಿದ್ದು, ಅಲ್ಲಿ ಸರ್ಕಾರ ಭಾರತೀಯರನ್ನು ವಾಪಸ್ ಕಳುಹಿಸಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸುತ್ತಿದೆ.
Thank you CG @georgebinoy. Keep up the good work.@MOS_MEA https://t.co/KHH351fWHA
— Dr. S. Jaishankar (@DrSJaishankar) March 14, 2020