Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಟಿ ಪ್ರತ್ಯುಷಾ ಪ್ರಕರಣ – ಆತ್ಮಹತ್ಯೆಗೆ ಪರಸ್ಪರ ಒಪ್ಪಿದ್ದ ಸಂದರ್ಭದಲ್ಲಿ ಬದುಕುಳಿದವರು ಶಿಕ್ಷಾರ್ಹರು: ಸುಪ್ರೀಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Court | ನಟಿ ಪ್ರತ್ಯುಷಾ ಪ್ರಕರಣ – ಆತ್ಮಹತ್ಯೆಗೆ ಪರಸ್ಪರ ಒಪ್ಪಿದ್ದ ಸಂದರ್ಭದಲ್ಲಿ ಬದುಕುಳಿದವರು ಶಿಕ್ಷಾರ್ಹರು: ಸುಪ್ರೀಂ

Court

ನಟಿ ಪ್ರತ್ಯುಷಾ ಪ್ರಕರಣ – ಆತ್ಮಹತ್ಯೆಗೆ ಪರಸ್ಪರ ಒಪ್ಪಿದ್ದ ಸಂದರ್ಭದಲ್ಲಿ ಬದುಕುಳಿದವರು ಶಿಕ್ಷಾರ್ಹರು: ಸುಪ್ರೀಂ

Public TV
Last updated: February 18, 2026 5:00 pm
Public TV
Share
2 Min Read
Pratyusha 3
SHARE

ನವದೆಹಲಿ: ಎರಡೂವರೆ ದಶಕಗಳ ಹಿಂದಿನ ತೆಲುಗು ನಟಿ ಪ್ರತ್ಯುಷಾ ಆತ್ಮಹತ್ಯೆ ಪ್ರಕರಣದಲ್ಲಿ (Pratyusha Suicide Case) ಆಕೆಯ ಗೆಳೆಯ ಗುಡಿಪಲ್ಲಿ ಸಿದ್ಧಾರ್ಥ ರೆಡ್ಡಿ ಎಂಬಾತನಿಗೆ ವಿಧಿಸಲಾದ ಶಿಕ್ಷೆಯನ್ನ ಸುಪ್ರೀಂ ಕೋರ್ಟ್‌ (Supreme Court) ಎತ್ತಿಹಿಡಿದಿದೆ. ಆತ್ಮಹತ್ಯೆಗೆ ಪರಸ್ಪರ ಒಪ್ಪಿದ ಪ್ರಕರಣದಲ್ಲಿ ಬದುಕುಳಿದವರು ಶಿಕ್ಷಾರ್ಹರು ಎಂದು ಹೇಳಿದೆ. ಆ ಮೂಲಕ ರೆಡ್ಡಿ 4 ವಾರಗಳ ಒಳಗೆ ಶರಣಾಗುವಂತೆ ತಾಕೀತು ಮಾಡಿದೆ.

ಇದು ಆರೋಪಿ (Accused) ಮತ್ತು ಮೃತ ವ್ಯಕ್ತಿಯ ನಡುವಿನ ಆತ್ಮಹತ್ಯೆ ಒಪ್ಪಂದ ಪ್ರಕರಣ ಎಂಬುದು ದಾಖಲೆಗಳು ಮತ್ತು ಸಾಕ್ಷ್ಯಗಳಿಂದ ಸ್ಪಷ್ಟವಾಗುತ್ತದೆ ಎಂದಿರುವ ನ್ಯಾಯಮೂರ್ತಿಗಳಾದ ಮನಮೋಹನ್‌ ಮತ್ತು ರಾಜೇಶ್‌ ಬಿಂದಾಲ್‌ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ಆತ್ಮಹತ್ಯೆಗೆ ಇಬ್ಬರೂ ಪರಸ್ಪರ ಒಪ್ಪಿರುವುದರಿಂದ ಬದುಕುಳಿದವರ ಮೇಲೆ ಕಾಯಿದೆ ಚಲಾಯಿಸಲು ಈ ಒಪ್ಪಂದ ಪ್ರೇರಣೆ ನೀಡುತ್ತದೆ ಎಂದಿದೆ.

Pratyusha 2

ಇಬ್ಬರೂ ಸಕ್ರಿಯವಾಗಿ ಭಾಗವಹಿಸದೇ ಹೋಗಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲ ಎಂದು ಪೀಠ ತಿಳಿಸಿದೆ. ಜೀವ ರಕ್ಷಣೆ ಪ್ರಭುತ್ವದ ಮೂಲಭೂತ ಹಿತಾಸಕ್ತಿಯಾಗಿರುವುದರಿಂದ, ಜೀವತ್ಯಾಗಕ್ಕೆ ಸಹಾಯ ಮಾಡುವುದನ್ನ ಕಾನೂನು ಅಪರಾಧವಾಗಿ ಪರಿಗಣಿಸುತ್ತದೆ. ಹೀಗಾಗಿ ಒಪ್ಪಿ ಆತ್ಮಹತ್ಯೆಗೆ ಮುಂದಾಗುವುದನ್ನ ಪ್ರಚೋದನೆ ಎಂದು ಕಾನೂನು ಪರಿಗಣಿಸುತ್ತದೆ ಎಂದಿದೆ.

ಆತ್ಮಹತ್ಯೆ ಒಪ್ಪಂದ ಪರಸ್ಪರ ಪ್ರೇರಣೆ ಮತ್ತು ಒಟ್ಟಿಗೆ ಸಾಯಲು ಪರಸ್ಪರ ಬದ್ಧತೆಯನ್ನ ಒಳಗೊಂಡಿರುತ್ತದೆ. ಬದುಕುಳಿದವರ ಉಪಸ್ಥಿತಿ ಮತ್ತು ಭಾಗವಹಿಸುವಿಕೆಯು ಸತ್ತವರ ಕ್ರಿಯೆಗಳಿಗೆ ನೇರ ವೇಗವರ್ಧಕವಾಗಿ ಕಾರ್ಯನಿರ್ವಹಿಸಿರುತ್ತದೆ ಎಂದು ಹೇಳಿದೆ.

ಪ್ರಕರಣದಲ್ಲಿ, ರೆಡ್ಡಿ ಕೀಟನಾಶಕದ ಬಗ್ಗೆ ತಿಳಿದೇ ಅದನ್ನ ಖರೀದಿಸಿ ಪ್ರತ್ಯುಷಾ ಜೊತೆಗೆ ಸೇವಿಸಿದ್ದಾರೆ. ಆದರೆ ರೆಡ್ಡಿ ಬದುಕುಳಿದಿದ್ದಾರೆ. ಆತ್ಮಹತ್ಯೆ ಒಪ್ಪಂದದಲ್ಲಿ ಭಾಗವಹಿಸಿ ಅದನ್ನ ಜಾರಿಗೆ ತಂದ ಆರೋಪಿಯ ನಡೆ, ಐಪಿಸಿ ಸೆಕ್ಷನ್ 306ರ ಸಹವಾಚನ ಸೆಕ್ಷನ್ 107 ಅಡಿಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡುವ ಅಪರಾಧ ಎನಿಸಿಕೊಳ್ಳುತ್ತದೆ ಎಂದಿರುವ ಪೀಠ ಪ್ರತ್ಯುಷಾಗೆ ವಿಷಪ್ರಾಶನ ನಡೆದಿದೆ ಎಂದು ಪ್ರಾಸಿಕ್ಯೂಷನ್ ಸ್ಪಷ್ಟವಾಗಿ ಸಾಬೀತುಪಡಿಸಿದೆ. ರೆಡ್ಡಿಯನ್ನ ಹೊಣೆಗಾರರನ್ನಾಗಿ ಮಾಡಲು ಅಗತ್ಯ ಕಾನೂನು ಷರತ್ತುಗಳನ್ನು ಪೂರೈಸಲಾಗಿದೆ ಎಂದು ವಿವರಿಸಿತು.

Pratyusha

ಹೈಕೋರ್ಟ್ ಪ್ರಕರಣವನ್ನು ನಿಭಾಯಿಸಿದ ರೀತಿಯನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ ಎಂದು ಪೀಠ ಹೇಳಿದೆ. ಆದರೆ ಇದು ಕತ್ತುಹಿಸುಕಿ ನಡೆಸಿದ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ. ಬದಲಿಗೆ ವಿಷಪ್ರಯೋಗ ನಡೆದಿರುವುದು ಸ್ಪಷ್ಟವಾಗಿದೆ ಎಂದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ಎರಡೂ ಮೇಲ್ಮನವಿಗಳನ್ನ ವಜಾಗೊಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ರೆಡ್ಡಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿಯಿತು. ಉಳಿದ ಶಿಕ್ಷೆ ಅನುಭವಿಸುವುದಕ್ಕಾಗಿ ರೆಡ್ಡಿ 4 ವಾರಗಳಲ್ಲಿ ಶರಣಾಗುವಂತೆ ಆದೇಶಿಸಿತು.

ನಟಿ ಪ್ರತ್ಯುಷಾಳದ್ದು ಆತ್ಮಹತ್ಯೆಯಲ್ಲ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ಆಕೆಯ ತಾಯಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೆಡ್ಡಿ ವಿರುದ್ಧ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ಸೇರಿದಂತೆ ಹಲವು ಆರೋಪಗಳನ್ನ ದಾಖಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ರೆಡ್ಡಿಯನ್ನ ತಪ್ಪಿತಸ್ಥನೆಂದು ತೀರ್ಮಾನಿಸಿ, 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.

ನಂತರ ಹೈಕೋರ್ಟ್‌ ರೆಡ್ಡಿ ವಿರುದ್ಧದ ದೋಷಾರೋಪವನ್ನ ಎತ್ತಿಹಿಡಿದಿತ್ತು. 5 ವರ್ಷಗಳ ಕಾಲ ವಿಧಿಸಲಾಗಿದ್ದ ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿ ದಂಡದ ಮೊತ್ತ ಹೆಚ್ಚಿಸಲಾಗಿತ್ತು. ಈ ತೀರ್ಪುಗಳ ವಿರುದ್ಧ ರೆಡ್ಡಿ ಹಾಗೂ ಪ್ರತ್ಯುಷಾ ತಾಯಿ ಎರಡು ಪ್ರತ್ಯೇಕ ಮೇಲ್ಮನವಿಗಳನ್ನ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ರೆಡ್ಡಿ ತನ್ನ ವಿರುದ್ಧದ ದೋಷಾರೋಪ ಪ್ರಶ್ನಿಸಿದರೆ ಪ್ರತ್ಯುಷಾಳ ತಾಯಿ ಶಿಕ್ಷೆ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್‌ ಇದೀಗ ನೀಡಿರುವ ತೀರ್ಪು 23 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದೆ.

TAGGED:Actor PratyushaboyfriendConvictedPratyusha CaseSupreme Courtನಟಿ ಪ್ರತ್ಯುಷಾಪ್ರತ್ಯುಷಾ ಆತ್ಮಹತ್ಯೆ ಪ್ರಕರಣಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

BY Vijayendra 1
Bagalkot

ಬಾಗಲಕೋಟೆ-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ: ವಿಜಯೇಂದ್ರ

Public TV
By Public TV
17 minutes ago
United States Air Force KC 135
Latest

ಅಮೆರಿಕದ ಫೈಟರ್ ಜೆಟ್‌ಗಳಿಗೆ ಇಂಧನ ಪೂರೈಸುವ ವಿಮಾನ ಪತನ – ನಾಲ್ವರು ಸಾವು, ಇಬ್ಬರಿಗೆ ಗಾಯ

Public TV
By Public TV
39 minutes ago
SUDHAKAR
Latest

HN ವ್ಯಾಲಿ, KC ವ್ಯಾಲಿಯಲ್ಲಿ ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು, ಇಲ್ಲದಿದ್ರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಸುಧಾಕರ್‌

Public TV
By Public TV
1 hour ago
POCSO Special Court
Bengaluru City

ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ – ಮಲತಂದೆ‌ ಸೇರಿ ಮೂವರು ಅರೆಸ್ಟ್

Public TV
By Public TV
1 hour ago
chikkamagaluru court sentences man to death for killing couple
Chikkamagaluru

ಎನ್‌.ಆರ್‌ಪುರ | ಮಗನ ಎದುರೇ ತಂದೆ, ತಾಯಿಯನ್ನು ಕೊಚ್ಚಿ ಕೊಲೆಗೈದವನಿಗೆ ಗಲ್ಲು ಶಿಕ್ಷೆ

Public TV
By Public TV
2 hours ago
H.D.Deve gowda team
Latest

ಸೋಮವಾರದಿಂದಲೇ ತಂಬಾಕು ಖರೀದಿ: ಹೆಚ್‌ಡಿಡಿ, ಹೆಚ್‌ಡಿಕೆಗೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಭರವಸೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?