ಚಂಡೀಗಢ: ಪಂಜಾಬಿ ಗಾಯಕರೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಪಂಜಾಬ್‍ನ ದೇರಾ ಬಸ್ಸಿಯಲ್ಲಿ ನಡೆದಿದೆ.
ನವಜೋತ್ ಸಿಂಗ್(22) ಕೊಲೆಯಾದ ಸಿಂಗರ್. ನವಜೋತ್ ಬೆಹರಾ ಗ್ರಾಮದಲ್ಲಿರುವ ತನ್ನ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಕಾರ್ ಪಾರ್ಕ್ ಮಾಡಿದ 50 ಮೀ ದೂರದಲ್ಲಿ ನವಜೋತ್ ಮೃತದೇಹ ದೊರೆತಿದೆ.
ನವಜೋತ್ ಭಾನುವಾರ ಸಂಜೆ ಸುಮಾರು 4 ಗಂಟೆಗೆ ತನ್ನ ಸ್ನೇಹಿತರನ್ನು ಭೇಟಿಯಾಗಲು ಪಂಚಕುಲಕ್ಕೆ ತೆರಳಿ ಬೇಗ ಹಿಂತಿರುಗುವುದ್ದಾಗಿ ಹೇಳಿ ಹೋಗಿದ್ದರು. ನಂತರ ರಾತ್ರಿ 11.15ಕ್ಕೆ ನವಜೋತ್ ತನ್ನ ತಾಯಿಗೆ ಕರೆ ಮಾಡಿ ಊಟದ ಬಗ್ಗೆ ವಿಚಾರಿಸಿ 5 ನಿಮಿಷದಲ್ಲಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು. ನವಜೋತ್ ಹಿಂದಿರುಗದಿದ್ದಾಗ ಆತನಿಗೆ ನಾವು ಪದೇ ಪದೇ ಕರೆ ಮಾಡುತ್ತಿದ್ದವು. ಅಲ್ಲದೇ ಆತನ ಬರುವಿಕೆಗಾಗಿ ಕಾಯುತ್ತಿದ್ದೇವು. ಆದರೆ ಫ್ಯಾಕ್ಟರಿ ಬಳಿಕ ಕಾರಿನ ಡೋರ್ ಓಪನ್ ಆಗಿತ್ತು. ಕಾರಿನ ಹತ್ತಿರದಲ್ಲೇ ಆತನ ಮೃತದೇಹ ಪತ್ತೆಯಾಗಿದೆ ಎಂದು ನವಜೋತ್ ತಂದೆ ಸುಖ್‍ದೇವ್ ಸಿಂಗ್ ತಿಳಿಸಿದ್ದಾರೆ.
ನವಜೋತ್ ಮೃತದೇಹ ಸಿಕ್ಕಾಗ ಆತನ ಚಿನ್ನದ ಸರ, ಚಿನ್ನದ ಖಡ್ಗ ಹಾಗೂ ಆತನ ಪರ್ಸ್ ಹಣವೆಲ್ಲಾ ಆತನ ಜೊತೆ ಇತ್ತು. ಯಾರೂ ಕೂಡ ಅದನ್ನು ಮುಟ್ಟಿರಲಿಲ್ಲ ಎಂದು ಪೊಲೀಸರು ತನಿಖೆ ನಡೆಸಿದ ನಂತರ ಹೇಳಿದ್ದಾರೆ.
ನವಜೋತ್ ಯುವತಿಯ ಜೊತೆ ಅಂಬಾಲಾ ರೋಡಿನಲ್ಲಿರುವ ಮೆಕ್ಡೊನಾಲ್ಡ್ಸ್ ಹೋಗುತ್ತಿದ್ದನು ಆತನ ಸಹೋದರ ಸಂಬಂಧಿ ನೋಡಿರುವುದರ ಬಗ್ಗೆ ಪೊಲೀಸರ ಹತ್ತಿರ ತಿಳಿಸಿದ್ದಾರೆ. ಸದ್ಯ ಈ ಕೇಸನ್ನು ಎಲ್ಲಾ ಆಯಾಮಗಳಿಂದಲೂ ವಿಚಾರಣೆ ನಡೆಸುತ್ತಿದ್ದೇವೆ. ಆ ಯುವತಿಯ ಬಗ್ಗೆಯೂ ವಿಚಾರಿಸಲಾಗುತ್ತದೆ ಎಂದು ದೇರಾ ಬಸ್ಸಿಯ ಎಎಸ್‍ಪಿ ಹರ್ಮನ್ ದೀಪ್ ಹಾನ್ಸ್ ಹೇಳಿದ್ದಾರೆ.
ದೇರಾ ಬಸ್ಸಿ ಆಸ್ಪತ್ರೆಯ ಮೂವರು ವೈದ್ಯರು ನವಜೋತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ನವಜೋತ್ ಎದೆಗೆ 5 ಗುಂಡು ಹಾರಿಸಿದ್ದು, 5 ಗುಂಡುಗಳು ಎದೆಗೆ ಹೊಕ್ಕಿತ್ತು. ಸದ್ಯ ಪೊಲೀಸರು ಮೂರು 9 ಎಂಎಂ ಮದ್ದುಗುಂಡುಗಳನ್ನು ವಶ ಪಡೆದುಕೊಂಡಿದ್ದಾರೆ.
ಈ ಕೊಲೆ ಕೇಸನ್ನು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಎಸ್‍ಎಚ್‍ಒ ಮೋಹಿಂದರ್ ಸಿಂಗ್ ತಿಳಿಸಿದ್ದಾರೆ.