ಮೆಕ್ಸಿಕೋ ಸಿಟಿ: ಉತ್ತರ ಮೆಕ್ಸಿಕೋದ (Mexico) ಸೂಪರ್ ಮಾರ್ಕೆಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಮಕ್ಕಳು ಸೇರಿದಂತೆ 23 ಮಂದಿ ಸಾವನ್ನಪ್ಪಿದ್ದಾರೆ.
ಹರ್ಮೊಸಿಲ್ಲೊದ ವಾಲ್ಡೋ ಅಂಗಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ 11 ಮಂದಿ ಗಾಯಗೊಂಡಿದ್ದು, ಅವರನ್ನು ನಗರದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಲಂಡನ್‌ಗೆ ತೆರಳುತ್ತಿದ್ದ ರೈಲಿನಲ್ಲಿ 10 ಜನರಿಗೆ ಚಾಕು ಇರಿತ – ಇಬ್ಬರು ಆರೋಪಿಗಳ ಬಂಧನ
ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು, ಮೃತರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ‘ಮೃತರ ಕುಟುಂಬಗಳು ಮತ್ತು ಗಾಯಾಳುಗಳಿಗೆ ಸಹಾಯ ಮಾಡಲು ಬೆಂಬಲ ತಂಡವನ್ನು ಕಳುಹಿಸಲು ನಾನು ಆಂತರಿಕ ಕಾರ್ಯದರ್ಶಿ ರೋಸಾ ಐಸ್ಲಾ ರೊಡ್ರಿಗಸ್ ಅವರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ಸ್ಫೋಟದ ವೇಳೆ ವಿಷಕಾರಿ ಅನಿಲ ಉಸಿರಾಟದಿಂದ ಹೆಚ್ಚಿನ ಮಂದಿ ಸಾವಿಗೀಡಾಗಿದ್ದಾರೆ ಎಂದು ವಿಧಿವಿಜ್ಞಾನ ವೈದ್ಯಕೀಯ ಸೇವೆಯ ರಾಜ್ಯದ ಅಟಾರ್ನಿ ಜನರಲ್ ಗುಸ್ತಾವೋ ಸಲಾಸ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೀವು ಹೀಗೆ ಮುಂದುವರಿದರೆ ತಕ್ಕ ಬೆಲೆ ತೆರಬೇಕಾಗುತ್ತೆ: ಪಾಕ್‌ಗೆ ಅಫ್ಘಾನಿಸ್ತಾನ ಖಡಕ್ ವಾರ್ನಿಂಗ್

