ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಒಂದು ವರ್ಷವಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಸಮಾಜಮುಖಿ ಕಾರ್ಯಗಳ ಮೂಲಕ ಪುನೀತ್ ಅವರನ್ನ ನೆನಪು ಮಾಡಿಕೊಳ್ತಾರೆ. ಇದೀಗ ಅಪ್ಪು ಮೇಲಿನ ಅಭಿಮಾನಕ್ಕೆ ಶಿವಮೊಗ್ಗದಲ್ಲಿ (Shivamogga) 23 ಅಡಿ ಎತ್ತರ ಪ್ರತಿಮೆಯನ್ನ ಮಾಡಲಾಗಿದೆ. ಶಿಲ್ಪ ಕಲಾವಿದ ಜೀವನ್ ನೇತೃತ್ವದ ಪುನೀತ್ ಕಲಾ ಕೃತಿಗೆ ಸಚಿವ ಶ್ರೀರಾಮುಲು (Minister Sriramulu) ನಿರ್ಮಾಣ ಮಾಡಲು ಸಾಥ್ ನೀಡಿದ್ದಾರೆ. ಪ್ರತಿಮೆ ಅನಾವರಣ ಮಾಡಲು ಭರ್ಜರಿ ತಯಾರಿ ನಡೆಯುತ್ತಿದೆ.
ನಟ ದಿವಂಗತ ಪುನೀತ್ ರಾಜಕುಮಾರ್ 23 ಅಡಿ ಎತ್ತರದ ಪ್ರತಿಮೆಯೊಂದು ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದಲ್ಲಿ ಸಿದ್ದಗೊಂಡಿದೆ. ಈ ಭವ್ಯ ಪ್ರತಿಮೆಯನ್ನು ಶಿಲ್ಪ ಕಲಾವಿದ ಜೀವನ್ ನೇತೃತ್ವದ ತಂಡದಿಂದ ಪುನೀತ್ ಕಲಾ ಕೃತಿ ನಿರ್ಮಾಣ ಮಾಡಲಾಗಿದೆ. ಸಾರಿಗೆ ಸಚಿವ ಶ್ರೀರಾಮುಲುರಿಂದ ನಟ ಪುನೀತ್ ರಾಜಕುಮಾರ್ ಅವರ ಈ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 21ರಂದು ಬಳ್ಳಾರಿ ಉತ್ಸವಕ್ಕೆ (Bellary Utsav) ಚಾಲನೆ ದೊರೆಯಲಿದೆ. ಅಂದು ಪುನೀತ್ ಪ್ರತಿಮೆ ಅನಾವರಣಗೊಳ್ಳಲಿದೆ. ಸುಮಾರು 3000 ಕೆಜಿ ತೂಕದ ಫೈಬರ್ ಆರ್ಟ್ ನಿಂದ ನಿರ್ಮಿಸಿದ ಅಪ್ಪುವಿನ ಕಲಾ ಕೃತಿ (Appu Statue) ಮೂಡಿ ಬಂದಿದೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್
ಪುನೀತ್ 23 ಅಡಿ ಎತ್ತರದ ವಿಗ್ರಹವನ್ನು ಸುಮಾರು 22 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 23 ಅಡಿ ಎತ್ತರದ ಪ್ರತಿಮೆಯನ್ನು ೩ ತಿಂಗಳಲ್ಲಿ ನಿರ್ಮಾಣವಾಗಿದೆ. ಕಬ್ಬಿಣ, ಫೈಬರ್‌ನಿಂದ ನಿರ್ಮಿಸಲಾಗಿದ್ದು, ಒಟ್ಟು 3 ಸಾವಿರ ಕೆ.ಜಿ. ತೂಕವನ್ನು ಹೊಂದಿದೆ. ಜೀವನ್ ಕಲಾ ಸನ್ನಿಧಿ ಹೆಸರಿನ ಶಿಲ್ಪಕಲಾ ಸಂಸ್ಥೆಯ ಜೀವನ್ ಮತ್ತವರ 15 ಜನ ಶಿಲ್ಪಿಗಳು ಈ ಪ್ರತಿಮೆಗಾಗಿ ಶ್ರಮವಹಿಸಿದ್ದಾರೆ. ಮೊದಲು ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡಿ ನಿರ್ಮಿಸಿಕೊಂಡು ಆ ನಂತರದಲ್ಲಿ ಪ್ರತಿಮೆಯನ್ನು ಮಾಡಲಾಗಿದೆ. ಅದಕ್ಕಾಗಿ 16 ಜನರ ತಂಡ ದಿನದ 24 ಗಂಟೆಗಳ ಕಾಲ ಹಗಲು ರಾತ್ರಿ 3 ತಿಂಗಳ ಕಾಲ ಕೆಲಸ ಮಾಡಿದೆ. 40 ಅಡಿ ಉದ್ದದ 20 ಚಕ್ರದ ಲಾರಿಯಲ್ಲಿ ಪುನೀತ್ ಪ್ರತಿಮೆಯನ್ನು ಇಂದೇ ಬಳ್ಳಾರಿಗೆ ರವಾನೆ ಮಾಡಲಾಗುತ್ತಿದೆ.
ಬಳ್ಳಾರಿಯ ಅಪ್ಪು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಚಿವ ಶ್ರೀರಾಮುಲು ಈ ಪ್ರತಿಮೆ ನಿರ್ಮಿಸಲು ಸೂಚಿಸಿದ್ದರು. ಈಗಾಗಲೇ ರಾಜ್ಯದಲ್ಲಿರುವ ಪುನೀತ್ ಈ ಹಿಂದಿನ ಪ್ರತಿಮೆಗಳಿಗಿಂತ ದೊಡ್ಡ ಪ್ರತಿಮೆ ನಿರ್ಮಿಸಬೇಕೆಂಬ ಶ್ರೀರಾಮುಲು ಅಪೇಕ್ಷೆಯಂತೆ ಮಾಡಲಾಗಿದೆ. ಅಪ್ಪು ಕಲಾಕೃತಿ ಅನಾವರಣ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತು ಪುನೀತ್ ಪತ್ನಿ ಅಶ್ವಿನಿ ಸೇರಿದಂತೆ ಇಡೀ ಕುಟುಂಬ ಭಾಗಿಯಾಗಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k