ವಾಷಿಂಗ್ಟನ್: ಅಮೆರಿಕದ (USA) ಪಶ್ಚಿಮ ಮಿಸಿಸಿಪ್ಪಿಯ (Mississippi) 200 ಜನರಿರುವ ಪಟ್ಟಣವಾದ ಸಿಲ್ವರ್ ಸಿಟಿ ಹಾಗೂ ಅಲ್ಬಾಮಾ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ (Tornado) ಕನಿಷ್ಠ 23 ಮಂದಿ ಬಲಿಯಾಗಿದ್ದಾರೆ. ನಾಲ್ವರು ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚಾರಣೆ ನಡೆಯುತ್ತಿದೆ.
Advertisement
ಭೀಕರ ಗಾಳಿಯ ಹೊಡೆತಕ್ಕೆ ಅನೇಕ ದೈತ್ಯ ಕಟ್ಟಡಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಿಸಿಸಿಪ್ಪಿ ಪ್ರಾಂತ್ಯದ ಗ್ರಾಮೀಣ ಪ್ರದೇಶವಾದ ಸಿಲ್ವಿರ್ ಸಿಟಿ ಮತ್ತು ರೋಲಿಂಗ್ ಫೋರ್ಕ್ ಪಟ್ಟಣ ಹಾಗೂ ಜಾಕ್ಸನ್ ನಗರದ ಈಶಾನ್ಯ ಪ್ರದೇಶದಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿವೆ. ಗಂಟೆಗೆ 100 ಮೈಲುಗಳಿಗಿಂತ ಹೆಚ್ಚು (160 ಕಿಮೀ) ವೇಗದಲ್ಲಿ ಗಾಳಿ ಬೀಸಿದ್ದು, ಸಾಕಷ್ಟು ಹಾನಿಯುಂಟುಮಾಡಿದೆ ಎಂದು ರಾಜ್ಯದ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
Advertisement
Visible and infrared satellite loop of the discrete tornado warned supercell southeast of Jackson, Mississippi. #MSwx pic.twitter.com/JDqcjg10o0
— Collin Gross (@CollinGrossWx) March 24, 2023
Advertisement
ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಮಿಸ್ಸಿಸ್ಸಿಪ್ಪಿ ತುರ್ತು ನಿರ್ವಹಣಾ ಸಂಸ್ಥೆ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ. 1,700 ಜನರಿರುವ ಪಟ್ಟಣವಾದ ರೋಲಿಂಗ್ ಫೋರ್ಕ್‌ನಲ್ಲಿಯೂ ಹಾನಿಯುಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.