-ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ
ಬೆಂಗಳೂರು: ಇಂದು 2019ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಒಟ್ಟು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಎಲ್ಲೆಲ್ಲಿ ಚುನಾವಣೆ?
ಕರ್ನಾಟಕ (14), ಗುಜರಾತ್ (26), ಕೇರಳ (20), ಗೋವಾ (2), ದಾದ್ರಾ ಮತ್ತು ನಗರ ಹವೇಲಿ (1), ದಮನ್ ಮತ್ತು ದಿಯು (1), ಅಸ್ಸಾಂ (4), ಬಿಹಾರ (5), ಛತ್ತೀಸ್‍ಗಢ (7), ಜಮ್ಮು ಮತ್ತು ಕಾಶ್ಮೀರ (1), ಮಹಾರಾಷ್ಟ್ರ (14), ಓರಿಸ್ಸಾ (6), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳದ (5) ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯಲಿದೆ.
Advertisement
Advertisement
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
1. ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ (ಕಾಂಗ್ರೆಸ್) ವರ್ಸಸ್ ಉಮೇಶ್ ಜಾಧವ್ (ಬಿಜೆಪಿ)
2. ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) ವರ್ಸಸ್ ಜಯಪ್ರದಾ (ಬಿಜೆಪಿ)
3. ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) ವರ್ಸಸ್ ರಾಜಶೇಖರನ್ (ಬಿಜೆಪಿ)
4. ಬಾರಮತಿ: ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ (ಎನ್‍ಸಿಪಿ) ವರ್ಸಸ್ ಕಾಂಚನಾ ಕುಲು (ಬಿಜೆಪಿ)
5. ಮೈನ್‍ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವರ್ಸಸ್ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)
6. ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವರ್ಸಸ್ ಹೇಮ್‍ರಾಜ್ ವರ್ಮಾ (ಎಸ್‍ಪಿ)
Advertisement
ಕರ್ನಾಟಕದ ಲೋಕ ಕ್ಷೇತ್ರಗಳು:
ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಮತ್ತು ರಾಯಚೂರು.