– ಅಂಡರ್-19 ಹುಡುಗರ ಆಟಕ್ಕೆ ಚೆನ್ನೈ ತಂಡ ಸುಸ್ತು
ದುಬೈ: ಯುವ ಆಟಗಾರದ ಪ್ರಿಯಮ್ ಗಾರ್ಗ್ ಮತ್ತು ಅಭಿಷೇಕ್ ಶರ್ಮಾ ಅವರ ಉತ್ತಮ ಜೊತೆಯಾಟದಿಂದ ಸನ್‍ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 165 ರನ್‍ಗಳ ಟಾರ್ಗೆಟ್ ನೀಡಿದೆ.
ದುಬೈ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020 14ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಪ್ರಿಯಮ್ ಗಾರ್ಗ್ ಅವರ ಭರ್ಜರಿ ಅರ್ಧಶತಕದೊಂದಿಗೆ ಚೆನ್ನೈ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ಆಗಿ ನೀಡಿದೆ. ಈ ಇನ್ನಿಂಗ್ಸ್ ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ಗಾರ್ಗ್ 26 ಎಸೆತದಲ್ಲಿ 51 ರನ್ ಸಿಡಿಸಿದರು. ಇದರಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಹೊಡೆದು ಮಿಂಚಿದರು.
Advertisement
How good are the two young guns for #SRH
Abishek Sharma and Priyam Garg bring up a brilliant 50-run partnership between them.#Dream11IPL #CSKvSRH pic.twitter.com/3QvSLBTRsn
— IndianPremierLeague (@IPL) October 2, 2020
Advertisement
ಗಾರ್ಗ್ ಅಭಿಷೇಕ್ ಜೊತೆಯಾಟ
10ನೇ ಓವರಿನಲ್ಲಿ ನಾಯಕ ಡೇವಿಡ್ ವಾರ್ನರ್ ಮತ್ತು ವಿಲಿಯಮ್ಸನ್ ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲಿಕಿದ್ದ ಹೈದರಾಬಾದ್ ತಂಡಕ್ಕೆ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ಪ್ರಿಯಮ್ ಗಾರ್ಗ್ ನಾಲ್ಕನೇ ವಿಕೆಟ್‍ಗೆ 43 ಎಸೆತಗಳಲ್ಲಿ 77 ರನ್‍ಗಳ ಜೊತೆಯಾಟವಾಡಿ ನೆರವಾದರು. 15 ಓವರ್ ಬಳಿಕ ಅಬ್ಬರದ ಆಟಕ್ಕೆ ಮುಂದಾದ ಗಾರ್ಗ್ ಮತ್ತು ಅಭಿಷೇಕ್ 3 ಓವರಿನಲ್ಲಿ 46 ರನ್ ಚಚ್ಚಿದರು. ಆದರೆ 17ನೇ ಓವರಿನ ಕೊನೆಯ ಬಾಲಿನಲ್ಲಿ 24 ಬಾಲಿನಲ್ಲಿ 31 ವಿಕೆಟ್ ಗಳಿಸಿ ಆಡುತ್ತಿದ್ದ ಅಭಿಷೇಕ್ ಔಟ್ ಆದರು.
Advertisement
A great partnership comes to an end. Chahar strikes and Abishek Sharma departs for 31.
Live – https://t.co/J1jCJPE40f #Dream11IPL #CSKvSRH pic.twitter.com/aevpzdxOBC
— IndianPremierLeague (@IPL) October 2, 2020
Advertisement
ಹೈದರಾಬಾದ್ ತಂಡಕ್ಕೆ ಮೊದಲ ಓವರಿನಲ್ಲೇ ಶಾಕ್ ನೀಡಿದ ವೇಗಿ ದೀಪಕ್ ಚಹರ್ ಅವರು, ಉತ್ತಮ ಲಯದಲ್ಲಿದ್ದ ಜಾನಿ ಬೈರ್‍ಸ್ಟೋವ್ ಅವರನ್ನು ಔಟ್ ಮಾಡಿದರು. ಟೂರ್ನಿಯಲ್ಲಿ ಮೊದಲ ಬಾರಿಗೆ ಜಾನಿ ಬೈರ್‍ಸ್ಟೋವ್ ಸೊನ್ನೆ ಸುತ್ತಿ ಹೊರನಡೆದರು. ಆ ನಂತರ ನಾಯಕ ಡೇವಿಡ್ ವಾರ್ನರ್ ಮತ್ತು ಮನೀಶ್ ಪಾಂಡೆ ತಾಳ್ಮೆಯ ಆಟಕ್ಕೆ ಮುಂದಾದರು. ಈ ಪರಿಣಾಮ ಹೈದರಾಬಾದ್ ತಂಡ ಪವರ್ ಪ್ಲೇ ಮುಕ್ತಾಯದ ವೇಳೆ ಒಂದು ವಿಕೆಟ್ ಕಳೆದುಕೊಂಡು 42 ರನ್ ಸೇರಿಸಿತು.
Caught unawares, MSD does the rest.
Williamson halfway down the pitch, is denied a run and falls short of his crease. MS Dhoni takes off the stumps and Williamson is run-out.
????????https://t.co/oDVR9J3lVG #Dream11IPL #CSKvSRH pic.twitter.com/9h3RuNw4ym
— IndianPremierLeague (@IPL) October 2, 2020
ಈ ನಡುವೆ ಐಪಿಎಲ್-2020ಯ ಮೊದಲ ಪಂದ್ಯದಲ್ಲೇ ಮ್ಯಾಜಿಕ್ ಮಾಡಿದ ಶಾರ್ದುಲ್ ಠಾಕೂರ್ ಅವರು ತನ್ನ ಎರಡನೇ ಓವರಿನ ಮೊದಲ ಬಾಲಿನಲ್ಲೇ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮನೀಶ್ ಪಾಂಡೆ ಅವರನ್ನು ಔಟ್ ಮಾಡಿದರು. ಈ ಮೂಲಕ 21 ಬಾಲಿಗೆ 29 ರನ್ ಸಿಡಿಸಿ ಪಾಂಡೆ ಔಟ್ ಆದರು. ನಂತರ ಜೊತೆಯಾದ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ 10 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 63ರಕ್ಕೆ ಏರಿಕೆ ಮಾಡಿದರು.
Watch, jump, catch – Faf special!
Another day, another catch and another @faf1307 trademark. He just keeps catching them the same way over and over again. Magnificent.https://t.co/b3pf9LnNIM #Dream11IPL #CSKvSRH
— IndianPremierLeague (@IPL) October 2, 2020
ಆದರೆ 10ನೇ ಓವರಿನ ಐದನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಡೇವಿಡ್ ವಾರ್ನರ್ 28 ರನ್ (29 ಎಸೆತ, 3 ಫೋರ್) ಫಾಫ್ ಡು ಪ್ಲೆಸಿಸ್ ಹಿಡಿದ ಚಾಣಕ್ಷ ಕ್ಯಾಚಿಗೆ ಪಿಯೂಷ್ ಚಾವ್ಲಾ ಅವರಿಗೆ ಬಲಿಯಾದರು. ನಂತರ ಅದೇ ಓವರಿನಲ್ಲಿ ಇಲ್ಲದ ರನ್ ಕದಿಯಲು ಹೋದ ವಿಲಿಯಮ್ಸನ್ ಅವರು ಕೂಡ 9 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಹೊಂದಾದ ಯುವ ಆಟಗಾರರದ ಅಭಿಷೇಕ್ ಶರ್ಮಾ ಮತ್ತು ಪ್ರಿಯಮ್ ಗಾರ್ಗ್ ಉತ್ತಮವಾಗಿ ಆಡಿ 15 ಓವರಿನಲ್ಲಿ ತಂಡವನ್ನು 100ರ ಗಡಿ ದಾಟಿಸಿದರು.
Huge TWO wickets as Warner and Williamson depart one after the other.#SRH 69/4 after 11 overs.#Dream11IPL pic.twitter.com/pJYUWbmIYk
— IndianPremierLeague (@IPL) October 2, 2020
ನಂತರ ಚೆನ್ನೈ ಬೌಲಿಂಗ್ ದಾಳಿಯನ್ನು ಉತ್ತಮವಾಗಿ ದಂಡಿಸಿದ ಅಭಿಷೇಕ್ ಮತ್ತು ಗಾರ್ಗ್ ಕೇವಲ 33 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದರು. ಈ ವೇಳೆ 16ನೇ ಓವರಿನಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಗಾರ್ಗ್ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 21 ರನ್ ಸಿಡಿಸಿದರು. ಇದೇ ವೇಳೆ 17ನೇ ಓವರಿನಲ್ಲಿ ಸತತ ಎರಡು ಕ್ಯಾಚ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೈಚೆಲ್ಲಿತು. ನಂತರ ಅಭಿಷೇಕ್ ಔಟ್ ಆದರು.