22ನೇ ಶೃಂಗಸಭೆ – ರಷ್ಯಾದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ

Public TV
2 Min Read
narendra modi russia 2

ಮಾಸ್ಕೋ: 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ (Narendra Modi) ರಷ್ಯಾಗೆ (Russia) ಭೇಟಿ ನೀಡಿದ್ದಾರೆ. 22ನೇ ಭಾರತ-ರಷ್ಯಾ ಶೃಂಗಸಭೆಯ (22nd India-Russia Summit) ಹಿನ್ನೆಲೆ ರಷ್ಯಾಗೆ ಬಂದಿಳಿದ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಇದೇ ವೇಳೆ ಮೋದಿಗೆ ರಷ್ಯಾ ಸೇನಾಪಡೆ ಗೌರವ ವಂದನೆ ಸಲ್ಲಿಸಿತು. ಬಳಿಕ ರಷ್ಯಾ ಉಪಪ್ರಧಾನಿ ಡೆನಿಸ್ ಮೆಂಟ್ರೋ ಮೋದಿಯನ್ನು ಬರಮಾಡಿಕೊಂಡರು. ಬಳಿಕ ಇಬ್ಬರೂ ಮೋದಿ ತಂಗಲಿರುವ ಹೋಟೆಲ್‌ಗೆ ತೆರಳಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಶೃಂಗಸಭೆಯನ್ನು ನಡೆಸಲು ಮೋದಿ ಸೋಮವಾರ ಮಾಸ್ಕೋಗೆ ಆಗಮಿಸಿದರು. ಮೋದಿ ಮತ್ತು ಅಧ್ಯಕ್ಷ ಪುಟಿನ್ ಮಂಗಳವಾರ ಮತ್ತೆ ಭೇಟಿಯಾಗಲಿದ್ದು, ಇಂಧನ, ವ್ಯಾಪಾರ, ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?

narendra modi russia 1

ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ತೆರಳಿದ ಬಳಿಕ ಹೊರಾಂಗಣದಲ್ಲಿ ದಾಂಡಿಯಾ ನೃತ್ಯದ ಮೂಲಕ ಮೋದಿಯನ್ನು ಸ್ವಾಗತಿಸಲಾಯಿತು. ಹೋಟೆಲ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸೋಮವಾರ ರಾತ್ರಿ ಅಧ್ಯಕ್ಷ ಪುಟಿನ್ ಮೋದಿಗಾಗಿ ಖಾಸಗಿ ಔತಣಕೂಟ ಸಹ ಆಯೋಜಿಸಿದ್ದಾರೆ. 2019ರ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ರಷ್ಯಾಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ – ನಾಲ್ವರು ಸೈನಿಕರು ಹುತಾತ್ಮ!

narendra modi russia

ಮಂಗಳವಾರ, ಮೋದಿ ಅವರು ಅಧ್ಯಕ್ಷ ಪುಟಿನ್ ಅವರೊಂದಿಗೆ 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೇ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಶೃಂಗಸಭೆಯ ಬಳಿಕ ಜು.9ರಂದು ಪ್ರಧಾನಿ ಮೋದಿ ಆಸ್ಟ್ರಿಯಾದತ್ತ ಪ್ರಯಾಣ ಬೆಳೆಸಲಿದ್ದಾರೆ. ಕಳೆದ 40 ವರ್ಷದಲ್ಲಿ ಆಸ್ಟ್ರಿಯಾ ಪ್ರವಾಸ ಕೈಗೊಳ್ಳುತ್ತಿರುವ ಮೊದಲ ಪ್ರಧಾನಿ ಎಂಬ ಗರಿಮೆಗೆ ಮೋದಿ ಪಾತ್ರರಾಗುತ್ತಿದ್ದಾರೆ. ಇದನ್ನೂ ಓದಿ: ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿಯೇ ಗ್ಯಾರಂಟಿಗಳನ್ನು ನೀಡಿದ್ದೇವೆ: ಪರಮೇಶ್ವರ್‌

ಮೋದಿ ಮಾಸ್ಕೋಗೆ ಬಂದಿಳಿಯುತ್ತಿದ್ದಂತೆ `ಒಸ್ಟಾನಿಕೊನೊ ಟಿವಿ ಟವರ್’ನಲ್ಲಿ ಭಾರತ ಮತ್ತು ರಷ್ಯಾದ ಧ್ವಜಗಳು ಹಾರಿದವು. ಯುರೋಪ್‌ನ ಅತಿ ಎತ್ತರದ ಹಾಗೂ ವಿಶ್ವದ 4ನೇ ಎತ್ತರದ ಟವರ್ ಇದಾಗಿದೆ. ಇಲ್ಲಿಯವರೆಗೆ, ಭಾರತ ಮತ್ತು ರಷ್ಯಾದಲ್ಲಿ 21 ವಾರ್ಷಿಕ ಶೃಂಗಸಭೆಗಳು ನಡೆದಿವೆ. ಇದನ್ನೂ ಓದಿ: ಹಾರಂಗಿ ಜಲಾಶಯದಿಂದ ನದಿಗೆ 1 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ

Share This Article