ಬೆಂಗಳೂರು: ಇಂದು ಕರ್ನಾಟಕದಲ್ಲಿ 2,258 ಮಂದಿಗೆ ಸೋಂಕು ಬಂದಿದ್ದು, 2,235 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 22 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,44,147ಕ್ಕೇರಿದೆ. ಇಂದು 27,823 ಮಂದಿಗೆ ಆಂಟಿಜನ್ ಟೆಸ್ಟ್, 78,494 ಮಂದಿಗೆ ಆರ್.ಟಿ.ಪಿ.ಸಿ.ಆರ್ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,06,317 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 86,20,970 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
Advertisement
Advertisement
ಬೆಂಗಳೂರು ನಗರದಲ್ಲಿ 1,046 ಮಂದಿಗೆ, ಮಂಡ್ಯ 68, ತುಮಕೂರು 165, ಮೈಸೂರು 79, ಹಾಸನದಲ್ಲಿ 83, ದಕ್ಷಿಣ ಕನ್ನಡದಲ್ಲಿ 72 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರದಲ್ಲಿ 480, ಬಳ್ಳಾರಿ 33, ತುಮಕೂರು 34, ಮೈಸೂರಿನಲ್ಲಿ 35, ಕೋಲಾರ 29, ಕಲಬುರಗಿ 30, ಹಾಸನ 23 ಮಂದಿ ಸೇರಿದಂತೆ ರಾಜ್ಯದಲ್ಲಿ 887 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.