ಬೆಂಗಳೂರು: ಆ ದ್ವಿಚಕ್ರ ವಾಹನದ (Two Wheeler) ಬೆಲೆ 35-30 ಸಾವಿರ ಇರಬಹುದು. ಆದರೆ ಆ ವಾಹನದ ಮೇಲೆ ಬರೋಬ್ಬರಿ 225 ಕೇಸ್ ದಾಖಲಾಗಿರುವಂತಹ ಘಟನೆ ನಡೆದಿದೆ.
ಹೌದು, ಜಯನಗರದ ಏಳುಮಲೈ ಅವರ ಟೂ ವೀಲರ್ನ ವಿರುದ್ಧ 225 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಈ ಮೂಲಕ ಕೇವಲ 25 ಸಾವಿರ ರೂ.ಯ ದ್ವಿಚಕ್ರ ವಾಹನಕ್ಕೆ ಬರೋಬ್ಬರಿ 1,34,000 ರೂ. ದಂಡ ಬಿದ್ದಿದೆ.
Advertisement
Advertisement
ನಗರದಲ್ಲಿ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರೋ ಪ್ರಕರಣ ಹೆಚ್ಚುತ್ತಾ ಇದ್ದಾಗ ಈ ಟೂ ವೀಲರ್ ಪತ್ತೆಯಾಗಿದೆ. ಬಳಿಕ ಈ ಗಾಡಿಯ ಮಾಲೀಕ ಏಳುಮಲೈ ಅವರಿಗೆ ಪೊಲೀಸರು ದಂಡದ (Traffic Fine)ಮೊತ್ತವನ್ನು ಹೇಳಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ
Advertisement
Advertisement
ಸದ್ಯ 1,34,000 ರೂ. ಬದಲಾಗಿ 10,000 ರೂ. ದಂಡವನ್ನು ಸ್ಥಳದಲ್ಲಿ ಕಟ್ಟಿಸಿಕೊಂಡು ಬಾಕಿ ದಂಡವನ್ನು ಪಾವತಿಸಲು ಏಳುಮಲೈಗೆ ಜಯನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ನಾಯಿ ಕಚ್ಚಿದ ಕೇಸ್ – ನಟ ದರ್ಶನ್ಗೆ ಕ್ಲೀನ್ ಚಿಟ್, ಶೀಘ್ರವೇ ಚಾರ್ಜ್ಶೀಟ್