– ಟೀಕೆಗಳಿಗೆ ಬ್ಯಾಟ್ನಿಂದ ಉತ್ತರ ಕೊಟ್ಟ ಕೆಕೆಆರ್ ನಾಯಕ
ಅಬುಧಾಬಿ: ಇಂದು ವಿಕೇಂಡ್ ಧಮಾಕಾದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಎದುರಾಳಿ ಪಂಜಾಬ್ ತಂಡಕ್ಕೆ 165 ರನ್ಗಳ ಗುರಿಯನ್ನು ನೀಡಿದೆ.
ಟೀಕೆಗಳಿಗೆ ಬ್ಯಾಟ್ನಿಂದ ಕಾರ್ತಿಕ್ ಉತ್ತರ
ಇಂದು ಬೇಗನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕೋಲ್ಕತ್ತಾ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ ನೆರವಾದರು. ಕೇವಲ 22 ಬಾಲಿಗೆ ಅರ್ಧಶತಕ ಪೂರ್ಣಗೊಳಿಸಿದ ದಿನೇಶ್ ಕಾರ್ತಿಕ್, ಅಂತಿಮವಾಗಿ 29 ಬಾಲಿಗೆ 58 ರನ್ ಸಿಡಿಸಿ ಔಟ್ ಆದರು. ಈ ಮೂಲಕ ನಾಯಕ ಮತ್ತು ಬ್ಯಾಟಿಂಗ್ನಲ್ಲಿ ಕಾರ್ತಿಕ್ ವಿಫಲರಾಗಿದ್ದಾರೆ. ಅವನ್ನು ನಾಯಕತ್ವದಿಂದ ಕೆಳಗಿಳಸಬೇಕು ಎಂದವರಿಗೆ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ.
Advertisement
That's a 50-run partnership between @RealShubmanGill & @DineshKarthik.
Live – https://t.co/1hhn0mYJ1t #Dream11IPL pic.twitter.com/7ldXRaufMy
— IndianPremierLeague (@IPL) October 10, 2020
Advertisement
ಪವರ್ ಪ್ಲೇನಲ್ಲಿ ಪಂಜಾಬ್ ವೇಗಿಗಳು ಮಿಂಚು
ಕಳೆದ ಪಂದ್ಯಗಳಲ್ಲಿ ದುಬಾರಿಯಾಗಿ ಟೀಕೆಗೆ ಒಳಗಾಗುತ್ತಿದ್ದ ಪಂಜಾಬ್ ವೇಗಿಗಳು ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದರು. ಪವರ್ ಪ್ಲೇ ವೇಳೆ 23 ಡಾಟ್ ಬಾಲ್ ಎಸೆದ ವೇಗಿಗಳು ಎರಡು ವಿಕೆಟ್ ಕಿತ್ತು ಕೇವಲ 25 ರನ್ ನೀಡಿದರು. ಪಂಜಾಬ್ ಪರ ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ಅವರು ತಲಾ ಒಂದು ವಿಕೆಟ್ ಪಡೆದುಕೊಂಡರು.
Advertisement
FIFTY!
That's a well made half-century by @RealShubmanGill. His 6th in IPL.#Dream11IPL pic.twitter.com/ZseqCaOLlN
— IndianPremierLeague (@IPL) October 10, 2020
Advertisement
ಟಾಸ್ ಗೆದ್ದು ಬ್ಯಾಟಿಂಗ್ಗೆ ಬಂದ ಕೋಲ್ಕತ್ತಾ ತಂಡಕ್ಕೆ ಮೂರನೇ ಓವರಿನಲ್ಲೇ ಮೊಹಮ್ಮದ್ ಶಮಿ ಶಾಕ್ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಾಹುಲ್ ತ್ರಿಪಾಠಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇವರ ನಂತರ ಕ್ರೀಸಿಗೆ ಬಂದ ನಿತೀಶ್ ರಾಣಾ ಅವರು ಇಲ್ಲದ ರನ್ ಕದಿಯಲು ಹೋಗಿ ಸಲುಭವಾಗಿ ರನ್ಔಟ್ ಆಗಿ ಹೊರ ನಡೆದರು. ಇನ್ನಿಂಗ್ಸ್ ಆರಂಭದಲ್ಲೇ ಪಂಜಾಬ್ ತಂಡ ಕೋಲ್ಕತ್ತಾದ ಮೇಲೆ ಒತ್ತಡ ಹಾಕಲು ಆರಂಭಿಸಿತು.
Bishnoi gets rewarded for smart bowling and gets the breakthrough!
Morgan departs after scoring 24 runs.
Live – https://t.co/1hhn0mYJ1t #Dream11IPL pic.twitter.com/PtXWNs3pHk
— IndianPremierLeague (@IPL) October 10, 2020
ಪಂಜಾಬ್ ತಂಡದ ವೇಗಿಗಳ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಕೋಲ್ಕತ್ತಾ, ಪವರ್ ಪ್ಲೇ ಮುಕ್ತಾಯದ ವೇಳಗೆ ಎರಡು ವಿಕೆಟ್ ಕಳೆದುಕೊಂಡು ಕೇವಲ 25 ರನ್ ಪೇರಿಸಿತು. ನಂತರ ಒದಾದ ಶುಭ್ಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರು ನಿಧಾನವಾಗಿ ತಂಡಕ್ಕೆ ರನ್ ಸೇರಿಸುತ್ತಾ ಹೋದರು. ಪರಿಣಾಮ 10 ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ತಂಡ ಎರಡು ವಿಕೆಟ್ ಕಳೆದುಕೊಂಡು 60 ರನ್ ಕಲೆ ಹಾಕಿತು. ಈ ಜೋಡಿ 42 ಬಾಲಿಗೆ 49 ರನ್ಗಳ ಜೊತೆಯಾಟವಾಡಿತು.
Comedy of errors: Rana walks back
Big mix-up between Gill & Rana. Both caught in the crease at one end. Rana is run-out. KKR lose their second.
????????https://t.co/RnUq5W3Wmg #Dream11IPL
— IndianPremierLeague (@IPL) October 10, 2020
ಆದರೆ 23 ಬಾಲಿಗೆ 24 ರನ್ ಸಿಡಿಸಿ ತಾಳ್ಮೆಯಿಂದ ಆಡುತ್ತಿದ್ದ ಇಯೊನ್ ಮೋರ್ಗಾನ್ ಅವರು 10ನೇ ಓವರಿನ ನಾಲ್ಕನೇ ಬಾಲಿನಲ್ಲಿ ಕ್ಯಾಚ್ ನೀಡಿ ಔಟ್ ಆದರು. ಆರಂಭದಿಂದಲೂ ಉತ್ತಮವಾಗಿ ಆಡಿದ ಶುಭ್ಮನ್ ಗಿಲ್ ಅವರು 42 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರು ಅಬ್ಬರದ ಬ್ಯಾಟಿಂಗ್ಗೆ ಮುಂದಾದರು. ಹೀಗಾಗಿ ಕಾರ್ತಿಕ್ ಗಿಲ್ ಜೋಡಿ 31 ಬಾಲಿಗೆ ಅರ್ಧಶತಕ ಜೊತೆಯಾಟವಾಡಿತು.
Just the kind of start #KXIP needed.
At the end of the powerplay, the scoreboard reads 25/2
Live – https://t.co/1hhn0mYJ1t #Dream11IPL pic.twitter.com/cRKrgJ5fes
— IndianPremierLeague (@IPL) October 10, 2020
ಇದೇ ವೇಳೆ ಸ್ಫೋಟಕ ಆಟಕ್ಕೆ ಮುಂದಾದ ನಾಯಕ ದಿನೇಶ್ ಕಾರ್ತಿಕ್ ಕೇವಲ 22 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. 17ನೇ ಓವರಿನ ಐದನೇ ಬಾಲಿನಲ್ಲಿ ಎರಡು ರನ್ ಓಡಲು ಹೋದ ಶುಭ್ಮನ್ ಗಿಲ್ ಅವರು 47 ಬಾಲಿಗೆ 57 ರನ್ ಸಿಡಿಸಿ ರನೌಟ್ ಆದರು. ನಂತರ ಬಂದ ಆಂಡ್ರೆ ರಸ್ಸೆಲ್ ಅವರು ಕೇವಲ 5 ರನ್ಗಳಿಸಿ 18ನೇ ಓವರಿನಲ್ಲಿ ಔಟ್ ಆದರು.