ಚೆನ್ನೈ: 22 ವರ್ಷದ ತಮಿಳುನಾಡಿನ ಯುವತಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗುವ ಮೂಲಕ ಸುದ್ದಿಯಾಗಿದ್ದಾರೆ.
ಹೊಸದಾಗಿ ರಚನೆಯಾದ ತೆಂಕಸಿ ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ಮೀಸಲಾಗಿರುವ ವೆಂಕದಂಪಟ್ಟಿ ಪಂಚಾಯತ್ ನಲ್ಲಿ 22 ವರ್ಷದ ಯುವತಿ ಸರುಲತಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Advertisement
Advertisement
ಈ ಗೆಲುವಿನ ಬಗ್ಗೆ ನನಗೆ ಸಂತೋಷವಾಗಿದೆ ಮತ್ತು ನಾನು ವಿನಮ್ರನಾಗಿದ್ದೇನೆ, ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದಿದ್ದಾರೆ.
Advertisement
ಈ ಕುರಿತು ಸರುಲತಾ ಅವರು ಪ್ರತಿಕ್ರಿಯಿಸಿದ್ದು, ನಾನು ಈ ಗೆಲುವಿಗೆ ತುಂಬಾ ಸಂತೋಷ ಪಡುತ್ತೇನೆ. ನನ್ನನ್ನು ನಂಬಿದ ಜನರಿಗೆ ನಾನು ವಿನಮ್ರನಾಗಿದ್ದೇನೆ ಎಂದು ತಿಳಿಸಿದರು. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಹೆಚ್ಚು ಹೆಚ್ಚು ವಿದ್ಯಾವಂತ ಯುವಕರು ರಾಜಕೀಯ ಪ್ರವೇಶಿಸಬೇಕು. ವಿದ್ಯಾವಂತ ಯುವಕರು ಇತರರಿಗಿಂತ ಹೆಚ್ಚು ಉತ್ತಮವಾಗಿ ಆಡಳಿತ ಮಾಡಬಹುದು ಎಂದು ಅವರು ನಂಬುತ್ತಾರೆ. ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾದ ಕಾಂಗ್ರೆಸ್ ನಿಯೋಗ
Advertisement
ಒಟ್ಟು 5 ಜನರು ಈ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, 22 ವರ್ಷದ ಯುವತಿ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ. ಲತಾ ಅವರು ಕೊಯಮತ್ತೂರಿನಲ್ಲಿ ಹಿಂದುಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದಾರೆ.
ತಮಿಳುನಾಡಿನ ಹೊಸದಾಗಿ ರಚನೆಯಾದ ಒಂಬತ್ತು ಜಿಲ್ಲೆಗಳಲ್ಲಿ ಚುನಾವಣೆ ನಡೆದಿತ್ತು. ಸರುಲತಾ ಅವರ ತಂದೆ ರವಿ ಸುಬ್ರಮಣಿಯನ್ ಅವರು ಕಳೆದ ಬಾರಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಪಂಚಾಯತ್ ಅಧಿಕಾರ ನಿರ್ವಹಣೆಗೆ ಕುಟುಂಬದ ಪುರುಷರ ಸಹಾಯವನ್ನು ಪಡೆಯುತ್ತಿರಾ ಎಂಬ ಪ್ರಶ್ನೆಗೆ, ನಾನು ಜನರೊಂದಿಗೆ ಸಮಾಲೋಚಿಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಒಡೆದು ಹೋದ 4 ಕೆರೆ ಕಟ್ಟೆಗಳು – ಆತಂಕದಲ್ಲಿ ಗ್ರಾಮಸ್ಥರು
ಮುಂದೆ ಭವಿಷ್ಯದಲ್ಲಿ ವಿಧಾನಸಭೆಗೆ ಅಥವಾ ಸಂಸತ್ತಿಗೆ ಹೋಗುವ ಆಸೆ ಇದೆಯಾ ಎಂದು ಕೇಳಿದ್ದಕ್ಕೆ ನಾನು ಅದರ ಬಗ್ಗೆ ಏನೂ ಯೋಚಿಸಿಲ್ಲ ಎಂದು ಹೇಳಿದ್ದಾರೆ.