ಟ್ರಕ್‌ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು – 22ರ ಯುವತಿ ದುರ್ಮರಣ

Public TV
1 Min Read
Girl

ನವದೆಹಲಿ: ಉತ್ತರ ದೆಹಲಿಯ ಸಿವಿಲ್‌ ಲೈನ್ಸ್‌ ಪ್ರದೇಶದಲ್ಲಿ (Delhi’s Civil Lines Area) ಟ್ರಕ್‌ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 22 ವರ್ಷದ ಯುವತಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದಾರೆ.

ಚಂದಗಿರಾಮ್‌ ಅಖಾರ ಸಿಗ್ನಲ್‌ನಲ್ಲಿ ಚಾಲಕ ಟ್ರಕ್‌ವೊಂದರ ಹಿಂದೆ ಕಾರು ನಿಲ್ಲಿಸಿದ್ದಾನೆ. ಅದೇ ಸಮಯಕ್ಕೆ ವೇಗವಾಗಿ ಬಂದ ಮತ್ತೊಂದು ಟ್ರಕ್‌ (Truck) ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ಟ್ರಕ್‌ಗಳ ಮಧ್ಯೆ ಸಿಲುಕಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಯುವತಿ ಸಾವನ್ನಪ್ಪಿದ್ದಾಳೆ. ಮೃತ ಯುವತಿಯನ್ನು ಅಮನ್‌ದೀಪ್‌ ಕೌರ್‌, ಕಾರು ಚಾಲಕನನ್ನು ಹರ್ಮಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೊಡಗಿಗೂ ವಿಸ್ತರಿಸಿದ ಮದ್ರಾಸ್ ಐ – ಕಳೆದ 20 ದಿನಗಳಲ್ಲಿ 136 ಪ್ರಕರಣಗಳು ಪತ್ತೆ

Accident

ಅಮನ್‌ದೀಪ್‌ ಕೌರ್‌ ತನ್ನ ಚಿಕ್ಕಮ್ಮ ಮತ್ತು ಅವರ ಸೋದರಸಂಬಂಧಿಗಳೊಂದಿಗೆ ಶಿಶ್‌ಗಂಜ್ ಗುರುದ್ವಾರದಿಂದ ತಿಮಾರ್‌ಪುರದ ನೆಹರು ವಿಹಾರ್‌ಗೆ ಪ್ರಯಾಣಿಸುತ್ತಿದ್ದಳು. ತನ್ನ ಚಿಕ್ಕಮ್ಮ ಪುಷ್ಪಾ ಮತ್ತು ಅವರ ಮಗಳು ಅಮನದೀಪ್ ಕೌರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಅಪಘಾತದಲ್ಲಿ ಅಮನ್‌ದೀಪ್ ಕೌರ್ ಮತ್ತು ಬಂಟಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಟ್ರಾಮಾ ಕೇರ್‌ ಸೆಂಟರ್‌ಗೆ ಕರೆತರಲಾಯಿತು. ಆದ್ರೆ ಅಮನ್‌ದೀಪ್‌ ಕೌರ್‌ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ದೆಹಲಿ ಪೊಲೀಸರು (Delhi Police) ಐಪಿಸಿ ಸೆಕ್ಷನ್‌ 279, 337 ಮತ್ತು 304A ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಟ್ರಕ್‌ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಜನಾಂಗೀಯ ಸಂಘರ್ಷ – ತನಿಖೆಯ ಮೇಲ್ವಿಚಾರಣೆಗೆ ನ್ಯಾಯಾಂಗ ಸಮಿತಿ ರಚನೆ

Web Stories

Share This Article