ಭುವನೇಶ್ವರ: 22 ವರ್ಷದ ಯುವತಿಯನ್ನು ಐವರು ಕಾಮುಕರು ಗ್ಯಾಂಗ್ ರೇಪ್ ಮಾಡಿರುವ ಘಟನೆ ಒಡಿಶಾದ (Odisha) ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.
ಆ.29 ರಂದು ಸಂಜೆ ಇಬ್ಬರು ಪರಿಚಯಸ್ಥ ವ್ಯಕ್ತಿಗಳು ಕೆಲಸದ ವಿಚಾರವಾಗಿ ಮಾತನಾಡಲು ನನ್ನನ್ನು ಬಂಗಿರಿಪೋಸಿ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಅಲ್ಲಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ಚಿನ್ನಯ್ಯ ಈಗ ಡಬಲ್ ಗೇಮ್ ಆಡುತ್ತಿದ್ದಾನೆ: ಜಯಂತ್
ಬಳಿಕ ಮಾರ್ಗ ಮಧ್ಯೆ ಕಾರಿಗೆ ಇನ್ನುಳಿದ ಮೂವರು ಹತ್ತಿಕೊಂಡಿದ್ದರು. ಉಡಾಲ ಮತ್ತು ಬಾಲಸೋರ್ ಪಟ್ಟಣವನ್ನು ಸಂಪರ್ಕಿಸುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ, ಅಲ್ಲೇ ಬಿಟ್ಟು ಹೋಗಿದ್ದರು ಎಂದು ಸಂತ್ರಸ್ಥೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ | ಮತ್ತೊಬ್ಬಳನ್ನು ಮದುವೆಯಾಗುವ ಆಸೆಗೆ ಪ್ರೇಯಸಿಯನ್ನೇ ಕೊಂದ ಪ್ರಿಯಕರ
ಸಂತ್ರಸ್ಥೆಯ ಹೇಳಿಕೆಯ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಈವರೆಗೆ ಇಬ್ಬರು ಆರೋಪಿಗಳು ಬಂಧಿಸಲಾಗಿದೆ. ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಉಡಾಲ ಠಾಣೆಯ (Udala police) ಪೊಲೀಸ್ ಅಧಿಕಾರಿ ಹೃಷಿಕೇಶ್ ನಾಯಕ್ ತಿಳಿಸಿದ್ದಾರೆ.