ಲಕ್ನೋ: ʻನೂರು ಸುಳ್ಳು ಹೇಳಿ ಒಂದು ಮದ್ವೆ ಮಾಡುʼ ಎಂಬ ಗಾದೆ ಮಾತನ್ನ ನಿಜ ಮಾಡಲೇಬೇಕು ಎನ್ನುವಂತ ಘಟನೆಯೊಂದು ಉತ್ತರಪ್ರದೇಶದ ಮೀರತ್‌ನಲ್ಲಿ (Meerut) ನಡೆದಿದೆ.
ಮೊಹಮ್ಮದ್ ಅಜೀಂ ಎಂಬ 22 ವರ್ಷದ ಬ್ರಹ್ಮಪುರಿ ನಿವಾಸಿ ಯುವಕನ ಮದುವೆಯನ್ನು ಅವನ ಸಹೋದರ ನದೀಂ ಮತ್ತು ಅತ್ತಿಗೆ ಶೈದಾ, ಶಾಮ್ಲ ಜಿಲ್ಲೆಯ ಮನ್ತಾಶಾ ಎಂಬ ಯುವತಿಯೊಂದಿಗೆ ನಿಗದಿಪಡಿಸಿದ್ದರು. ಅದರಂತೆ ಮಾ.31ರಂದು ಮದುವೆಯೂ (Marriage) ನಡೆಯಿತು. ಇದನ್ನೂ ಓದಿ: Uttar Pradesh | ಅಳಿಯನ ತಂದೆಯೊಂದಿಗೆ 4 ಮಕ್ಕಳ ತಾಯಿ ಪರಾರಿ
ಈ ವೇಳೆ, ಸಂಪ್ರಾದಾಯದಂತೆ ಮೌಲ್ವಿ ಅವರು ಹುಡುಗಿಯ ಹೆಸರನ್ನು ತಾಹಿರಾ ಎಂದು ಹೇಳಿದಾಗ ಅಜೀಂ ಕಳವಳಗೊಂಡಿದ್ದಾನೆ. ಬಳಿಕ ಆಕೆಯ ಮುಸುಕು ತೆಗೆದಾಗ 21 ವರ್ಷದ ಯುವತಿಯ ಬದಲು, ವಧುವಿನ ಉಡುಗೆಯಲ್ಲಿದ್ದ ಆಕೆಯ 45 ವರ್ಷದ ವಿದವಾ ತಾಯಿಯ ದರ್ಶನವಾಗಿದೆ. ಹೀಗೆ ತಾನು ವರಿಸಿದ್ದು ವಧುವಿನ ತಾಯಿಯನ್ನು ಎಂದು ತಿಳಿದು ಮದುಮಗ ಕಕ್ಕಾಬಿಕ್ಕಿಯಾಗಿದ್ದಾನೆ. ಇದನ್ನೂ ಓದಿ: ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ
ತನಗಾದ ವಂಚನೆಯ ವಿರುದ್ಧ ಅಜೀಂ ಪ್ರತಿಭಟಿಸಿದಾಗ, ಆತನ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೊರಿಸುವುದಾಗಿ ನದೀಂ ಮತ್ತು ಶೈದಾ ಬೆದರಿಸಿದ್ದಾರೆ. ಆದರೂ ಅಜೀಂ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದು, ವಧುವಿನ ಕುಟುಂಬಕ್ಕೆ 5 ಲಕ್ಷ ರೂ. ಹಣವನ್ನೂ ಕೊಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾನೆ.
ಮದುವೆ ಪ್ರಕರಣದ ಕುರಿತುಮಾತನಾಡಿದ ಬ್ರಹ್ಮಪುರಿಯ ಸಿಇಒ ಸೌಮ್ಯಾ ಆಸ್ಥಾನಾ, ವಧು-ವರರ ಕುಟುಂಬಗಳು ಇತ್ಯರ್ಥ ಮಾಡಿಕೊಂಡಿದ್ದು, ತಾನು ಕಾನೂನು ಕ್ರಮ ಬಯಸುವುದಿಲ್ಲ ಎಂದು ಹೇಳಿ ಅಜೀಂ ತಾನು ನೀಡಿದ ದೂರನ್ನು ಹಿಂಪಡೆದಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿ ಜನರ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯ ಬದಿಗಿಡಲು ಸಿದ್ಧ – ಮೈತ್ರಿ ಸುಳಿವು ನೀಡಿದ ಉದ್ಧವ್, ರಾಜ್ ಠಾಕ್ರೆ ಸಹೋದರರು