ಕಾನ್ಪುರ: ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ 22 ವರ್ಷದ ನರ್ಸ್ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ.
ಅತ್ಯಾಚಾರವೆಸಗುವ ಮುನ್ನ ನರ್ಸ್‌ಗೆ ಅಮಲು ಬೆರೆಸಿದ ತಂಪು ಪಾನೀಯವನ್ನು ನೀಡಲಾಗಿತ್ತು ಎಂದು ಶಂಕಿಸಲಾಗಿದೆ. ಎಫ್‌ಐಆರ್ (FIR) ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಖಲಿಸ್ತಾನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪೊಲೀಸ್ ಅಧಿಕಾರಿ ಅಮಾನತು
- Advertisement
ಕಲ್ಯಾಣಪುರದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅಭಿಷೇಕ್ ಪಾಂಡೆ ಮಾತನಾಡಿ, ಮಹಿಳೆ ಕಳೆದೆರಡು ತಿಂಗಳುಗಳಿಂದ ಕಲ್ಯಾಣಪುರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಸಂಜೆ, ಆಸ್ಪತ್ರೆಯಲ್ಲಿ ನಿರ್ದೇಶಕ ಆಯೋಜಿಸಿದ್ದ ಪಾರ್ಟಿಯಲ್ಲಿ ನರ್ಸ್ ಪಾಲ್ಗೊಂಡಿದ್ದಳು. ಕೆಲಸದ ನೆಪದಲ್ಲಿ ಆಕೆಯನ್ನು ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರುವಂತೆ ನಿರ್ದೇಶಕ ಹೇಳಿದ್ದು, ಮಧ್ಯರಾತ್ರಿ ಆಕೆಯನ್ನು ಕೋಣೆಗೆ ಕರೆದು ಬಲವಂತವಾಗಿ ಒಳಗೆ ಎಳೆದುಕೊಂಡು ಹೋಗಿ ಬಾಗಿಲು ಹಾಕಿ ಕೃತ್ಯವೆಸಗಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆಗೂ ಮುನ್ನ ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್
- Advertisement
ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ನರ್ಸ್‌ಗೆ ನಿರ್ದೇಶಕ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ದೇಶವನ್ನು ಕಾಡುತ್ತಿದೆ ಡಿಜಿಟಲ್ ಅರೆಸ್ಟ್ ಎಂಬ ʻಭೂತʼ – ಪ್ರಧಾನಿ ನೀಡಿದ ಎಚ್ಚರಿಕೆ ಸಂದೇಶವೇನು? ಕೇಂದ್ರದ ಮಾರ್ಗಸೂಚಿ ಏನು?
ಆರೋಪಿಯ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಬಂಧನದ ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶದ ನಂತರ ಜೆಡಿಎಸ್, ಬಿಜೆಪಿ ಜೊತೆ ಮರ್ಜ್ ಆಗಬಹುದು: ಡಿಕೆಶಿ