ವಾಷಿಂಗ್ಟನ್: ಅಮೆರಿಕದ (America) ಫೋರ್ಟ್ ನಾಕ್ಸ್‌ನಲ್ಲಿ (Fort Knox) ತರಬೇತಿಯ ಸಮಯದಲ್ಲಿ ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕಾರ್ಪ್ಸ್ (ROTC) ಕೆಡೆಟ್ ಸಾವನ್ನಪ್ಪಿದ್ದಾರೆ.
ನ್ಯೂಜೆರ್ಸಿಯ ರಿಡ್ಜ್‌ವುಡ್‌ನ ನೀಲ್ ಎಡರಾ (22) ಸಾವನ್ನಪ್ಪಿದ ದುರ್ದೈವಿ. ಜು.24 ರಂದು ಕೆಂಟುಕಿಯ ಮಿಲಿಟರಿ ನೆಲೆಯಲ್ಲಿ ಲ್ಯಾಂಡ್ ನ್ಯಾವಿಗೇಷನ್ ಸೈಟ್‌ನಲ್ಲಿ ಅವರು ಸಾವಿಗೀಡಾದರು ಎಂದು ಯುಎಸ್ ಆರ್ಮಿ ಕೆಡೆಟ್ ಕಮಾಂಡ್ (US Army Cadet Command) ತಿಳಿಸಿದೆ.
ತರಬೇತಿಯ ಸ್ಥಳದಲ್ಲಿ ಅವರು ಎಚ್ಚರ ತಪ್ಪಿದ್ದರು. ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ಲೂಯಿಸ್‌ವಿಲ್ಲೆ ವಿಶ್ವವಿದ್ಯಾಲಯದ ಆಸ್ಪತ್ರೆಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಇದನ್ನೂ ಓದಿ: ಅಂದು ಇಂಡಿಯಾ ಔಟ್ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್ | ಇದು ಮೋದಿ ಮ್ಯಾಜಿಕ್
ಎಡರಾ 9 ನೇ ರೆಜಿಮೆಂಟ್ ಅಡ್ವಾನ್ಸ್ಡ್ ಕ್ಯಾಂಪ್‌ನ ಭಾಗವಾಗಿ ಕೆಡೆಟ್ ತರಬೇತಿಗೆ ಹಾಜರಾಗಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚುವರಿ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಯುಎಸ್ ಆರ್ಮಿ ಕೆಡೆಟ್ ಕಮಾಂಡ್ ಹೇಳಿದೆ.
ಎಡರಾ ಬಗ್ಗೆ ಮಾತಾಡಿದ ಪ್ರಾಧ್ಯಾಪಕ ಲೆಫ್ಟಿನೆಂಟ್ ಕರ್ನಲ್ ತಿಮೋತಿ ಸೊರೆನ್ಸನ್, ಸಮರ್ಪಿತ ಮತ್ತು ಭರವಸೆಯ ಯುವ ನಾಯಕರಲ್ಲಿ ಕೆಡೆಟ್ ಎಡಾರ ಒಬ್ಬರು. ಅವರು ಶಾಂತಾ ಸ್ವಭಾವದವರು. ಅವರ ಕುಟುಂಬಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಕೆಡೆಟ್ ತರಬೇತಿಯು ಯುಎಸ್ ಸೈನ್ಯದ ಅತಿದೊಡ್ಡ ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ದೇಶಾದ್ಯಂತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ 7,000 ಕ್ಕೂ ಹೆಚ್ಚು ROTC ಕೆಡೆಟ್‌ಗಳು ಅಡ್ವಾನ್ಸ್ಡ್ ಅಥವಾ ಬೇಸಿಕ್ ಕ್ಯಾಂಪ್‌ಗೆ ಹಾಜರಾಗುತ್ತಾರೆ. 35 ದಿನಗಳ ಅಡ್ವಾನ್ಸ್ಡ್ ಕ್ಯಾಂಪ್ ಆರ್ಮಿ ROTCಯ ಕ್ಯಾಪ್‌ಸ್ಟೋನ್ ಕೋರ್ಸ್, ಎರಡನೇ ಲೆಫ್ಟಿನೆಂಟ್ ಆಗಿ ನಿಯೋಜನೆಗೊಳ್ಳಲು, ಕೆಡೆಟ್‌ಗಳ ನಾಯಕತ್ವ ಮತ್ತು ಸೈನಿಕ ಕೌಶಲ್ಯಗಳಿಗೆ ಇದು ಅವಶ್ಯಕವಾಗಿದೆ. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ