ಭೋಪಾಲ್: ಸಾಮಾನ್ಯವಾಗಿ ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಏರಿ ಬರುತ್ತಾನೆ. ಆದರೆ ಇಲ್ಲೊಬ್ಬ 22 ವರ್ಷದ ವಧು ತನ್ನ ವಿವಾಹ ಮರೆವಣಿಗೆಯಲ್ಲಿ ಸ್ವತಃ ತಾನೇ ಕುದುರೆ ಸವಾರಿ ಮಾಡಿಕೊಂಡು ಬಂದಿದ್ದಾಳೆ.
ಭೋಪಾಲ್‍ನ ಜಹಾಂಗೀರಾಬಾರ್‍ನ ಬಾಪು ಕಾಲೋನಿ ಈ ಮದುವೆ ಮೆರವಣಿಗೆ ನಡೆದಿದ್ದು, 22ರ ಮನಾಲಿ ಮೆಹ್ರೊಲಿಯಾ ತನ್ನ ಮದುವೆ ಸಮಾರಂಭದ ಮೆರವಣಿಗೆಯಲ್ಲಿ ‘ಬಸಂತಿ’ ಕುದುರೆಯ ಮೇಲೆ ಕುಳಿತು ಸವಾರಿ ಮಾಡಿದ್ದಾಳೆ.
ವಧು ಮನಾಲಿ ಪೋಷಕರಿಗೆ ಒಬ್ಬಳೆ ಮಗಳಿದ್ದು, ಮೂವರು ಗಂಡು ಮಕ್ಕಳಿದ್ದಾರೆ. ಮನಾಲಿ ತನ್ನ ಮದುವೆಯಲ್ಲಿ ವರನಂತೆ ಕುದುರೆ ಸವಾರಿ ಮಾಡಬೇಕೆಂದು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಅದರಂತೆಯೇ ಮನಾಲಿ ಆಸೆಯಂತೆ ವಿವಾಹ ಸಮಾರಂಭದಲ್ಲಿ ಆಕೆಯೇ ಕುದುರೆ ಸವಾರಿ ಮಾಡಿದ್ದಾಳೆ.
ವಧು ಮನಾಲಿ ವರ ಕುನಾಲ್ ಜೊತೆ ವಿವಾಹವಾಗಿದ್ದಾರೆ. ಈ ಮದುವೆ ಮೆರವಣಿಗೆ ಚಿಕ್ಲೊಡ್ ರಸ್ತೆಯ ಮೂಲಕ ಸಿಕಂದೇರಿಯಾ ಪ್ರದೇಶದವರೆಗೂ ಕುದುರೆ ಸವಾರಿ ಮಾಡಲಾಗಿದೆ.
https://www.youtube.com/watch?v=bOQa5jM5bmQ