ಜೈಪುರ: ನಗರದ 22 ಜನರಲ್ಲಿ ಭಯಾನಕ ಜಿಕಾ ವೈರಸ್ ಪತ್ತೆಯಾಗಿದ್ದು, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೆಪ್ಟೆಂಬರ್ 24ರಂದು ಓರ್ವ ಪುರುಷ ಮತ್ತು ಮಹಿಳೆಯ ರಕ್ತದ ಮಾದರಿಯ ತಪಾಸಣೆಯಲ್ಲಿ ಜಿಕಾ ವೈರಸ್ ಇರೋದು ಬೆಳಕಿಗೆ ಬಂದಿದೆ. ಈ ಇಬ್ಬರ ನೆರೆಹೊರೆಯ ಜನರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಈಗಾಗಲೇ 7 ಜನರು ಜಿಕಾ ವೈರಸ್ ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
Advertisement
ಇತ್ತ ಬಿಹಾರದ 38 ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷನೆ ಮಾಡಿದೆ. ಬಿಹಾರ ರಾಜ್ಯದ ವಿದ್ಯಾರ್ಥಿಯೋರ್ವ ಆಗಸ್ಟ್ 28ರಿಂದ ಸೆಪ್ಟೆಂಬರ್ 12ರವರೆಗೆ ಜೈಪುರನಲ್ಲಿ ನಡೆದ ಪರೀಕ್ಷೆಗೆ ಹಾಜರಾಗಿದ್ದನು. ಈ ಹಿನ್ನೆಲೆಯಲ್ಲಿ ಆತನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ, ವಿದ್ಯಾರ್ಥಿಯ ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
Advertisement
Advertisement
ಜಿಕಾ ವೈರಸ್ ಸೋಂಕು ಕಂಡು ಬಂದ ರೋಗಿಗಳನ್ನು ಜೈಪುರ ನಗರದ ಎಸ್‍ಎಂಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 7 ವೈದ್ಯರ ತಂಡ ಜಿಕಾ ವೈರಸ್ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜೈಪುರದ ಆರು ವಾರ್ಡ್ ಗಳಲ್ಲಿ 179 ಮೆಡಿಕಲ್ ಟೀಂ ವೈದ್ಯರ ಜನರ ತಪಾಸಣೆಯಲ್ಲಿ ನಿರತವಾಗಿವಾಗಿದೆ. ಗರ್ಭಿಣಿ, ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಗಮನ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇತ್ತ ಜೈಪುರ ಕಾರ್ಪೋರೇಷನ್ ಸಿಬ್ಬಂದಿ ಸಹ 2000 ಕಂಟೇನರ್ ಗಳ ಮೂಲಕ ನಗರದಾದ್ಯಂತ ವಾಯು ವಿಶ್ರಿತ ಔಷಧಿ ಸಿಂಪಡನೆಯಲ್ಲಿ ನಿರತರಾಗಿದ್ದಾರೆ.
Advertisement
ಒಟ್ಟು 89 ದೇಶಗಳಲ್ಲಿ ಜಿಕಾ ವೈರಸ್ ಕಂಡು ಬಂದಿದ್ದು, 2017ರ ಫೆಬ್ರವರಿಯಲ್ಲಿ ಅಹಮದಾಬಾದ್ ಮೂಲದ ವ್ಯಕ್ತಿಯೊಬ್ಬರಲ್ಲಿ ಕಂಡು ಬಂದಿತ್ತು. ಜುಲೈ 2017ರಲ್ಲಿ ತಮಿಳುನಾಡು ರಾಜ್ಯದ ಕೃಷ್ಣಗಿರಿಯ ಜಿಲ್ಲೆಯಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv