ಇಸ್ಲಾಮಾಬಾದ್: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವ್ಯಾನ್ 100 ಅಡಿಗೂ ಹೆಚ್ಚು ಆಳವಿದ್ದ ಕಮರಿಗೆ ಬಿದ್ದು 22 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಪಾಕಿಸ್ತಾನದ ಪರ್ವತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.
ವ್ಯಾನ್ ನೂರಾರು ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಳಿತಪ್ಪಿದ ರೈಲು – 10 ಸಾವು, 50 ಮಂದಿಗೆ ಗಾಯ
Advertisement
1,572 ಮೀಟರ್ ಎತ್ತರದಲ್ಲಿರುವ ಕಿಲ್ಲಾ ಸೈಫುಲ್ಲಾ ಬಳಿಯ ಅಖ್ತರ್‌ಜೈ ಎಂಬ ಪರ್ವತ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಕಮರಿಗೆ ಉರುಳಿ ಅವಘಡ ಸಂಭವಿಸಿದೆ.
Advertisement
Advertisement
ಝೋಬ್ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಹಫೀಜ್ ಮಹಮ್ಮದ್ ಖಾಸಿಮ್, ಪ್ರಯಾಣಿಕರಿದ್ದ ವ್ಯಾನ್ ಲೊರಾಲಿಯಾದಿಂದ ಝೋಬ್ ಪಟ್ಟಣಕ್ಕೆ ಪ್ರಯಾಣಿಸುತ್ತಿತ್ತು ಎಂದು ತಿಳಿಸಿದ್ದಾರೆ.
Advertisement
“ವಾಹನವು ಅಖ್ತರ್‌ಜೈ ಬಳಿ ಬೆಟ್ಟದ ತುದಿಯಿಂದ ಬಿದ್ದಿದೆ. ಪರ್ವತಗಳಲ್ಲಿನ ಆಳವಾದ ಕಮರಿಗೆ ವ್ಯಾನ್ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಯಿತು. ನಾವು ಇದುವರೆಗೆ 10 ಶವಗಳನ್ನು ಹೊರತೆಗೆದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್
ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಅಪಘಾತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮುಂದೆ ಇಂತಹ ಅವಘಡಗಳು ಸಂಭವಿಸಿದಂತೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.