– ವ್ಯಕ್ತಿಯಿಂದ ಮನಬಂದಂತೆ ಗುಂಡಿನ ದಾಳಿ
ಬ್ಯಾಂಕಾಕ್: ಥಾಯ್ಲೆಂಡ್‌ನ(Thailand) ಮಕ್ಕಳ ಡೇ-ಕೇರ್ ಸೆಂಟರ್‌ಗೆ(Day Care Centre) ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿ 22 ಮಕ್ಕಳು ಸೇರಿದಂತೆ 34 ಮಂದಿಯನ್ನು ಹತ್ಯೆ ಮಾಡಿದ್ದಾನೆ.
Advertisement
Some reports said there were up to 30 victims but that is still unconfirmed by the police.
The families of the victims have arrived at the site.#กราดยิง #กราดยิงหนองบัวลำภู pic.twitter.com/DQ1TDAWsox
— Thai Enquirer (@ThaiEnquirer) October 6, 2022
Advertisement
ಈಶಾನ್ಯ ಪ್ರಾಂತ್ಯದ ನೊಂಗ್‌ಬುವಾ ಲ್ಯಾಂಫು ಪಟ್ಟಣದದಲ್ಲಿ ಈ ಶೂಟೌಟ್ ನಡೆದಿದೆ. ಸಾಮೂಹಿಕ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್
Advertisement
ದಾಳಿಕೋರ 34 ವರ್ಷದ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಡೇ ಕೇರ್ ಕೇಂದ್ರದ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಪತ್ನಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
Advertisement
Prime Minister General Prayut Chan-ocha ordered a manhunt for the shooter who is still at large.#กราดยิง #กราดยิงหนองบัวลำภู pic.twitter.com/zoXAH90fPO
— Thai Enquirer (@ThaiEnquirer) October 6, 2022
ಥಾಯ್ಲೆಂಡ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪವಾದರೂ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಬಂದೂಕು ಮಾಲೀಕತ್ವದ ಪ್ರಮಾಣವು ಅಧಿಕವಾಗಿದೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಇಲ್ಲಿ ಸಾಮಾನ್ಯವಾಗಿದೆ.