ಬೀದರ್: 22 ಕೋಟಿ ರೂ. ಬೆಲೆಬಾಳುವ ಸರ್ಕಾರದ ಆಸ್ತಿಯನ್ನು ಕೇವಲ 28 ಸಾವಿರ ರೂ.ಗಳಿಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವಂಥ ಅಕ್ರಮ ಬೀದರ್ ನಗರಸಭೆಯಲ್ಲಿ ನಡೆದಿದೆ.
ನಗರಸಭೆ ಆಯುಕ್ತ ಕೆ. ನರಸಿಂಹಮೂರ್ತಿ ಹಾಗೂ ಹಿರಿಯ ಉಪ ನೋಂದಣಾಧಿಕಾರಿ ಎಸ್.ಎಂ ಹೆಮೇಶ್ ಕೆಲ ಖಾಸಗಿ ವ್ಯಕ್ತಿಗಳಿಗೆ ಕೋಟಿ ಕೋಟಿ ಬೆಲೆಬಾಳುವ ಆಸ್ತಿಯನ್ನು ಕೇವಲ 28 ಸಾವಿರಕ್ಕೆ ಮಾರಾಟ ಮಾಡಿದ್ದಾರೆಂದು ಡಿಯುಡಿಸಿ ಅಧಿಕಾರಿ ನಗರದ ಮಾರ್ಕೆಟ್ ಠಾಣೆಯಲ್ಲಿ ಕ್ರೀಮಿನಲ್ ಕೇಸ್ ದಾಖಲಿಸಿದ್ದರು. ಇದೀಗ ಪೊಲೀಸರು ನಗರಸಭೆ ಆಯುಕ್ತರು ಹಾಗೂ ಉಪನೊಂದಣಾಧಿಕಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Advertisement
ಇನ್ನು ಜಿಲ್ಲಾಧಿಕಾರಿಗಳಿಗೆ ಪೌರಾಡಳಿತ ಸಚಿವರು ಪತ್ರ ಬರೆದಿದ್ದು, ತನಿಖೆ ಕೈಗೊಂಡು ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಡಿಯುಡಿಸಿ ಅಧಿಕಾರಿಗಳ ದೂರಿನ ಮೇರೆಗೆ ಮುನ್ಸಿಪಲ್ ಕಾಯ್ದೆ ಮತ್ತು ಕ್ರೀಮಿನಲ್ ಕೇಸ್ ದಾಖಲು ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಎಸ್‍ಪಿ ದೇವರಾಜ್ ಹೇಳಿದ್ದಾರೆ.