ಲಕ್ನೋ: ಉತ್ತರ ಪ್ರದೇಶದಲ್ಲಿ(Uttar Pradesh) ಸಬರಮತಿ ಎಕ್ಸ್‌ಪ್ರೆಸ್ (ವಾರಾಣಸಿ-ಅಹಮದಾಬಾದ್) ರೈಲಿನ 22 ಬೋಗಿಗಳು ಹಳಿ ತಪ್ಪಿದೆ. ಅದೃಷ್ಟವಶಾತ್ ಯವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾನ್ಪುರ್ ಮತ್ತು ಭೀಮಸೇನ್ ನಡುವೆ ಸಬರಮತಿ ಎಕ್ಸ್ಪ್ರೆಸ್ (Sabaramati Express) ರೈಲಿನ 22 ಬೋಗಿಗಳು ಹಳಿ ತಪ್ಪಿದೆ. ಅದೇ ಹಳಿ ಮೇಲೆ ಮೆಮೊ ರೈಲೊಂದು ಬರುತ್ತಿತ್ತು. ಅದೃಷ್ಟವಷಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಪ್ರಯಾಣಿಕರನ್ನು ಬಸ್ಸಿನ ಮೂಲಕ ಕಾನ್ಪುರ್ ರೈಲ್ವೆ ಸ್ಟೇಷನ್ ತಲುಪಿಸಿದ್ದೇವೆ ಎಂದು ಜಿಲ್ಲಾ ಮಾಜಿಸ್ಟ್ರೇಟ್ ರಾಕೇಶ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧದ ತನಿಖೆಗೆ ರಾಜ್ಯಪಾಲರ ಅನುಮತಿ – ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು: ಆರ್.ಅಶೋಕ್
ಸಬರಮತಿ ಎಕ್ಸ್‌ಪ್ರೆಸ್ (ವಾರಾಣಸಿ-ಅಹಮದಾಬಾದ್) (Varanasi-Ahmedabad) ರೈಲು ಕಾನ್ಪುರ್ ಹತ್ತಿರ ನಸುಕಿನ 2:35 ಗಂಟೆಗೆ ಹಳಿ ತಪ್ಪಿದೆ. ಎಂಜಿನ್ ಹೀಟ್ ಆಗಿರುವುದು ಗಮನಕ್ಕೆ ಬಂದಿದೆ. ಅದರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಐಬಿ ಮತ್ತು ಯುಪಿ ಪೊಲೀಸರು ಪರೀಶಿಲನೆ ಮಾಡುತ್ತಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಸಮಸ್ಯೆಯಾಗಿಲ್ಲ. ಪ್ರಯಾಣಿಕರಿಗೆ ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ
ಪ್ರಯಾಣಿಕರನ್ನು ಘಟನೆ ನಡೆದ ಸ್ಥಳದಿಂದ ಕಾನ್ಪುರ್‌ವರೆಗೆ ಬಸ್ಸಿನಲ್ಲಿ ಕರೆದೊಯ್ಯಲಾಗಿದೆ. ಕಾನ್ಪುರದಿಂದ ಮತ್ತೊಂದು ರೈಲಿನ ವ್ಯವಸ್ಥೆ ಮಾಡಿ, ಪ್ರಯಾಣಿಕರನ್ನು ಅಹಮದಾಬಾದ್ ವರೆಗೆ ತಲುಪಿಸುತ್ತೇವೆ ಎಂದು ಝಾನ್ಸಿ ವಿಭಾಗದ ರೈಲ್ವೆ ಅಧಿಕಾರಿ ದೀಪಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಧೈರ್ಯವಾಗಿರಿ, ನಿಮ್ಮ ಜೊತೆ ನಾವಿದ್ದೇವೆ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್