– ಪುತ್ತೂರಿನಿಂದ ಬೆಂಗ್ಳೂವರೆಗೂ ಸಹಕರಿಸಿದ ಸ್ಥಳೀಯರು
ಚಿಕ್ಕಮಗಳೂರು: ತುರ್ತು ಶಸ್ತ್ರಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದೊಯ್ಯುವಾಗ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಜನ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಡ್ರೈವರ್ ಹಾಗೂ ಯುವತಿಗೆ ಶುಭಕೋರಿದ್ದಾರೆ.
ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಮೂಲದ 22 ವರ್ಷದ ಸುಹಾನ ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಳು. ಯುವತಿಗೆ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು ಝೀರೋ ಟ್ರಾಫಿಕ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Advertisement
Advertisement
ಪುತ್ತೂರಿನಿಂದ ಬೆಂಗಳೂರಿಗೆ ಸುಮಾರು 7-8 ಗಂಟೆ ಸಮಯದ ಮಾರ್ಗವನ್ನ 3 ಗಂಟೆ 45 ನಿಮಿಷಕ್ಕೆ ತಲುಪುವ ಸಾಧ್ಯತೆ ಇದೆ. ಸುಹಾನ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಲಂಗ್ಸ್ ಟ್ರಾನ್ಸ್ ಪ್ಲಾಂಟ್ ತುರ್ತು ಶಸ್ತ್ರ ಚಿಕಿತ್ಸೆಯ ತುರ್ತು ಅಗತ್ಯವಿದ್ದು, ಪುತ್ತೂರಿನಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಝೀರೋ ಟ್ರಾಫಿಕ್ ನಲ್ಲಿ ಕೊಂಡೊಯ್ಯಲಾಗಿದೆ.
Advertisement
ಈ ವೇಳೆ ಅಂಬುಲೆನ್ಸ್ ಗೆ ಪುತ್ತೂರಿನಿಂದ ಬೆಂಗಳೂರಿನವರೆಗೂ ದಾರಿಯುದ್ದಕ್ಕೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ಕೂಡ ಸಹಕರಿಸಿದ್ದಾರೆ. ಅಂಬುಲೆನ್ಸ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬರುತ್ತಿದ್ದಂತೆ ಸ್ಥಳೀಯರು ಅಂಬುಲೆನ್ಸ್‍ಗೆ ದಾರಿ ಮಾಡಿಕೊಟ್ಟು ಡ್ರೈವರ್ ಹಾಗೂ ಯುವತಿಗೆ ಶುಭ ಕೋರಿದ್ದಾರೆ. ಸುಮಾರು 390 ಕಿ.ಮೀ. ದೂರದ ಮಾರ್ಗದುದ್ದಕ್ಕೂ ಪೊಲೀಸ್ ಇಲಾಖೆ ಕೂಡ ಝೀರೋ ಟ್ರಾಫಿಕ್‍ಗೆ ಎಲ್ಲಾ ವ್ಯವಸ್ಥೆ ಮಾಡಿದೆ.