ನವದೆಹಲಿ: ಕೇಂದ್ರದ ನೀತಿ ಸುಧಾರಣೆಗಳನ್ನು ಎತ್ತಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರು, 21ನೇ ಶತಮಾನದ ಭಾರತ ಸರ್ಕಾರ ಕೇಂದ್ರಿತ ಆಡಳಿತವನ್ನು ಬಿಟ್ಟು ಜನ ಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ‘ಐಕಾನಿಕ್ ವೀಕ್ ಸೆಲೆಬ್ರೇಷನ್ಸ್’ನಲ್ಲಿ ಮೋದಿ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶವು ಹಿಂದೆ ಸರ್ಕಾರಿ ಕೇಂದ್ರಿತ ಆಡಳಿತದ ಭಾರವನ್ನು ಹೊತ್ತುಕೊಂಡಿದೆ. ಆದರೆ ಇಂದು 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ರಾಯಚೂರು ಬಂದ್: ಕರ್ತವ್ಯಲೋಪ ಹಿನ್ನೆಲೆ ಜೂ.ಇಂಜಿನಿಯರ್ ವಜಾ
Advertisement
Our faith is in India’s youth and their ability to propel our nation to new heights of progress. pic.twitter.com/tGsLEyDEex
— Narendra Modi (@narendramodi) June 6, 2022
Advertisement
ಒಂದು ಕಾಲದಲ್ಲಿ ನೀತಿಗಳು ಮತ್ತು ನಿರ್ಧಾರಗಳು ಸರ್ಕಾರ ಕೇಂದ್ರಿತವಾಗಿದ್ದವು. ಯೋಜನೆ ಪ್ರಾರಂಭವಾದ ನಂತರ ಅದರ ಪ್ರಯೋಜನಗಳನ್ನು ಪಡೆಯಲು ಸರ್ಕಾರವನ್ನು ತಲುಪುವ ಜವಾಬ್ದಾರಿ ಜನರ ಮೇಲಿತ್ತು. ಅಂತಹ ವ್ಯವಸ್ಥೆಯಲ್ಲಿ ಸರ್ಕಾರದ ಜವಾಬ್ದಾರಿ ಮತ್ತು ಆಡಳಿತವು ಕಡಿಮೆಯಾಗುತ್ತಿತ್ತು. ಕಳೆದ ಎಂಟು ವರ್ಷಗಳಲ್ಲಿ ಯುವಕರಿಗೆ ತಮ್ಮ ಸಾಮಥ್ರ್ಯವನ್ನು ಸಾಧಿಸಲು ಹೆಚ್ಚು ಅವಕಾಶ ಕೊಡಲಾಗಿದೆ ಎಂದು ವಿವರಿಸಿದರು.
Advertisement
ಈಗ ನಮ್ಮ ಯುವಕರು ತಮಗೆ ಬೇಕಾದ ಕಂಪನಿಯನ್ನು ಸುಲಭವಾಗಿ ತೆರೆಯಬಹುದು. ಅವರು ತಮ್ಮ ಉದ್ಯಮಗಳನ್ನು ಸುಲಭವಾಗಿ ನಡೆಸಬಹುದು. ಕಂಪನಿಗಳ ಕಾಯಿದೆಯ ಹಲವಾರು ನಿಬಂಧನೆಗಳನ್ನು ಕಡಿಮೆ ಮಾಡುವ ಮೂಲಕ ನಮ್ಮ ಭಾರತೀಯ ಕಂಪನಿಗಳು ಹೊಸ ಎತ್ತರ ಸಾಧಿಸುತ್ತೀದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Policies cannot only be government-centric. We have seen the pitfalls of this approach for decades.
Our Government has always followed a people-centric approach to development. This has led to several gains for upcoming entrepreneurs. pic.twitter.com/1P6HdVyG51
— Narendra Modi (@narendramodi) June 6, 2022
ಸುಧಾರಣೆಗಳ ಜೊತೆಗೆ, ನಾವು ಸರಳೀಕರಣದತ್ತ ಗಮನಹರಿಸುತ್ತಿದ್ದೇವೆ. ಜಿಎಸ್‍ಟಿಯ ಸರಳೀಕರಣವು ಈಗ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಹಲವು ತೆರಿಗೆಗಳ ಜಾಲವನ್ನು ಬದಲಿಸಿದೆ. ಈ ಸರಳೀಕರಣದ ಫಲಿತಾಂಶವನ್ನು ದೇಶವೂ ನೋಡುತ್ತಿದೆ. ಈಗ ಇದು ಜಿಎಸ್‍ಟಿ ಸಂಗ್ರಹಕ್ಕೆ ಸಾಮಾನ್ಯವಾಗಿದ್ದು, ಪ್ರತಿ ತಿಂಗಳು 1 ಲಕ್ಷ ಕೋಟಿ ರೂ. ದಾಟಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!