ಕಾರವಾರ: ಕಲುಷಿತ ನೀರು ಕುಡಿದು 216 ಜನ ಕಾರ್ಮಿಕರು ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದಾಂಡೇಲಿಯ ವೆಸ್ಟ್ ಕಾಸ್ಟ್ ಪೇಪರ್ ಮಿಲ್ ನಲ್ಲಿ ನೆಡೆದಿದೆ.
ಪೇಪರ್ ಮಿಲ್‍ನ ಕ್ಯಾಂಟೀನ್ ಹಾಗೂ ಶುದ್ಧೀಕರಣ ಘಟಕದಿಂದ ಬರುವ ನೀರನ್ನು ಕಾರ್ಮಿಕರು ಸೇವಿಸಿದ್ದಾರೆ. ಈ ನೀರು ಕಲ್ಮಷಯುಕ್ತವಾಗಿದ್ದು, ಬ್ಯಾಕ್ಟೀರಿಯಾಗಳು ಹಾಗೂ ವೈರಸ್‍ಗಳು ಸೇರಿದ್ದರಿಂದ ನೀರು ಸೇವಿಸಿದ ಜನರಿಗೆ ಜಾಂಡಿಸ್ ಕಾಣಿಸಿಕೊಂಡಿದೆ. ಅನಾರೋಗ್ಯಪೀಡಿತ ಕಾರ್ಮಿಕರನ್ನು ದಾಂಡೇಲಿ ಕಾರ್ಮಿಕರ ವಿಮಾ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಸರ್ವೇಕ್ಷಣಾಧಿಕಾರಿಗಳು ಭೇಟಿ ನೀಡಿ ನೀರಿನ ಮಾದರಿ ಪರೀಕ್ಷಿಸಿ ನೀರು ಕಲ್ಮಷವಾಗಿದ್ದನ್ನು ದೃಢಪಡಿಸಿದ್ದಾರೆ.