ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದಕ ದಾಳಿಗಳ (Terrorist Attack) ಸಂಖ್ಯೆ ಇಳಿಕೆಯಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಹಿಂದಿನ ಯುಪಿಎ ಸರ್ಕಾರದ (UPA Government) ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಅತಿಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ. ಆದರೆ ಇಂದಿನ ಬಿಜೆಪಿ (BJP) ಸರ್ಕಾರದ (Central Government Of India) ಅವಧಿಯಲ್ಲಿ ಅತಿಹೆಚ್ಚು ಉಗ್ರರನ್ನು ಬಂಧಿಸಲಾಗಿದೆ. ಮೋದಿ ಅವಧಿಯಲ್ಲಿ 2,132 ಉಗ್ರ ದಾಳಿಗಳು ನಡೆದಿದ್ದು, 1,538 ಉಗ್ರರನ್ನು ಕೊಲ್ಲಲಾಗಿದೆ. ಇದನ್ನು ಓದಿ: ತೋಟದ ಕೆಲಸ ಮಾಡುವಂತೆ ತಂದೆ ಒತ್ತಡ – ಮಗ ಆತ್ಮಹತ್ಯೆ
Advertisement
Advertisement
ಕಳೆದ 18.5 ವರ್ಷದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ (Jammu and Kashmir) ಒಟ್ಟು 11,453 ಭಯೋತ್ಪಾದಕ ದಾಳಿ ನಡೆದಿದ್ದು, 5,543 ಉಗ್ರರನ್ನು ಹತ್ಯೆಗೈದು 2,310 ಉಗ್ರರನ್ನು ಬಂಧಿಸಲಾಗಿದೆ.
Advertisement
ಮಹಾರಾಷ್ಟ್ರದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯದ (Ministry of Home Affairs) ಜಮ್ಮು-ಕಾಶ್ಮೀರ ವಿಭಾಗವು ನೀಡಿದ ಉತ್ತರದಲ್ಲಿ ಈ ಅಂಕಿ-ಅಂಶಗಳಿವೆ. ಅದರ ಪ್ರಕಾರ, 2004ರಿಂದ 2013ರ ಯುಪಿಎ ಅವಧಿಯ 10 ವರ್ಷದ ಆಳ್ವಿಕೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ 9,321 ಭಯೋತ್ಪಾದಕ ದಾಳಿ ನಡೆದಿವೆ. ಆ ವೇಳೆ 4,005 ಉಗ್ರರನ್ನು ಕೊಂದು, 878 ಉಗ್ರರನ್ನು ಬಂಧಿಸಲಾಗಿದೆ.
Advertisement
2014 ರಿಂದ ಈವರೆಗೆ ಜಮ್ಮು-ಕಾಶ್ಮೀರದಲ್ಲಿ 2,132 ಭಯೋತ್ಪಾದಕ ದಾಳಿ ನಡೆದಿದ್ದು, 1,538 ಉಗ್ರರನ್ನು ಕೊಂದು 1,432 ಉಗ್ರರನ್ನು ಬಂಧಿಸಲಾಗಿದೆ. ಇದನ್ನು ಓದಿ: ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು
ಕೇಂದ್ರ ಗೃಹ ಸಚಿವಾಲಯವು ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾತ್ರ ಮಾಹಿತಿ ನೀಡಿದೆ. ದೇಶದ ಇತರೆಡೆ ಈ ಅವಧಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಮಾಹಿತಿ ನೀಡಿಲ್ಲ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ (Surgical Strike) ನಡೆಸಿದ ನಂತರ ಭಯೋತ್ಪಾದಕರಲ್ಲಿ ನಡುಕ ಹುಟ್ಟಿದ್ದು, ಆನಂತರ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ತಮಗೆ ದೊರೆತ ಅಂಕಿ-ಅಂಶಗಳನ್ನು ವಿಶ್ಲೇಷಿಸಿದ್ದಾರೆ.