BollywoodCinemaLatestMain Post

`ಲಗಾನ್’ ಚಿತ್ರಕ್ಕೆ 21 ವರ್ಷ: ಮಾಜಿ ಪತ್ನಿಗೆ ಸಿನಿಮಾ ಅರ್ಪಣೆ ಎಂದ ಅಮೀರ್ ಖಾನ್

ಬಾಲಿವುಡ್ ನಟ ಅಮೀರ್ ಖಾನ್ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದ ಲಗಾನ್ ಸಿನಿಮಾ 21 ವರ್ಷಗಳ ಸಂಭ್ರಮದಲ್ಲಿದ್ದು, ಈ ಸಿನಿಮಾವನ್ನು ತನ್ನ ಮಾಜಿ ಪತ್ನಿ ರೀನಾ ದತ್ತಗೆ ಅರ್ಪಣೆ ಎಂದಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ `ಲಗಾನ್’ ಚಿತ್ರಕ್ಕೆ 21 ವರ್ಷಗಳ ಸಂಭ್ರಮದಲ್ಲಿದೆ. ಇದೇ ಜೂನ್ 15ಕ್ಕೆ 2001ರಂದು ತೆರೆಗೆ ಅಬ್ಬರಿಸಿತ್ತು. ಇದೀಗ ಈ ಚಿತ್ರಕ್ಕೆ 21 ವರ್ಷಗಳು ತುಂಬಿದ್ದು, ಅಮೀರ್ ಮನೆಯಲ್ಲಿ ಚಿತ್ರದ ಸಂಭ್ರಮ ಆಚರಿಸಲು ಚಿತ್ರತಂಡ ಭರ್ಜರಿ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ವಿಕ್ರಮ್ ಸಿನಿಮಾದಿಂದ ಕಮಲ್ ಹಾಸನ್ ಗಳಿಸಿದ್ದು 300 ಕೋಟಿ – ಬಂದ ಹಣದಿಂದ ಸಾಲ ತೀರಿಸ್ತೀನಿ ಅಂದ ನಟ

ಅಶುತೋಷ್ ಗೋವಾರಿಕಲ್ ನಿರ್ದೇಶನದ ಲಗಾನ್ ಚಿತ್ರದಲ್ಲಿ ಅಮೀರ್ ಜತೆ ಗ್ರೇಸಿ ಸಿಂಗ್ ಮತ್ತು ರಾಚೆಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡು ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿತ್ತು. ಇದೀಗ ಈ ಚಿತ್ರದ ಸಕ್ಸಸ್ ಕುರಿತು ಅಮೀರ್ ಖಾನ್ ಮಾತನಾಡಿದ್ದಾರೆ. ಈ ಚಿತ್ರ ತನ್ನ ಮಾಜಿ ಪತ್ನಿ ರೀನಾ ದತ್ತ್‌ಗೆ ಅರ್ಪಣೆ ಎಂದಿದ್ದಾರೆ.

ಅಂದು ರೀನಾಗೆ ಸಿನಿಮಾ ಬಗ್ಗೆ ಎನು ಗೊತ್ತಿರಲಿಲ್ಲ. ಚಿತ್ರರಂಗದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೂ ಈ ಚಿತ್ರದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಹಾಗಾಗಿ ಈ ಚಿತ್ರದ ಯಶಸ್ಸಿಗೆ ಮಾಜಿ ಪತ್ನಿ ರೀನಾ ದತ್ತ್ ಕಾರಣ. ಈ ಚಿತ್ರ ಅವರಿಗೆ ಅರ್ಪಣೆ ಎಂದು ಚಿತ್ರದ ಕುರಿತು ಅಮೀರ್ ಮೆಲುಕು ಹಾಕಿದ್ದಾರೆ. ನೆಚ್ಚಿನ ನಟನಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಮುಂದಿನ ಚಿತ್ರ `ಲಾಲ್ ಸಿಂಗ್ ಚಡ್ಡಾ’ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

Live Tv

Leave a Reply

Your email address will not be published.

Back to top button