ಮುಂಬೈ: 21 ವರ್ಷದ ಯುವಕನೊಬ್ಬ 18 ವರ್ಷದ ತನ್ನ ಗೆಳೆಯನನ್ನೇ ಕತ್ತು ಸೀಳಿ ಬಳಿಕ 54 ಬಾರಿ ಇರಿದು ಕೊಲೆಗೈದ ಆಘಾತಕಾರಿ ಘಟನೆಯೊಂದು ನಗರದಲ್ಲಿ ನಡೆದಿದೆ.
ಮೊಹಮ್ಮದ್ ಆಫ್ರೋಜ್ ಆಲಂ ಶೇಖ್ ಎಂಬ ಯುವಕನನ್ನು ಮೊಹಮ್ಮದ್ ಅಮೀರ್ ಅಬ್ದುಲ್ ವಹೀದ್ ರಹೀನ್ ಎಂಬಾತ ಕೊಲೆಗೈದಿದ್ದಾನೆ.
Advertisement
ಮೃತ ಯುವಕ ತನ್ನೊಂದಿಗೆ ಇಂಗ್ಲಿಷ್ ನಲ್ಲಿ ಮಾತ್ರ ವ್ಯವಹರಿಸುತ್ತಾನೆ. ಅಲ್ಲದೇ ನನಗೆ ಇಂಗ್ಲಿಷ್ ಬರಲ್ಲ ಅಂತ ತಮಾಷೆ ಮಾಡಿರುವುದರಿಂದ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿ ಸಾಹು ನಗರ ಪೊಲೀಸರಲ್ಲಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.
Advertisement
ಸುಮಾರು ಮಧ್ಯರಾತ್ರಿ 1 ಗಂಟೆ ವೇಳೆಗೆ ಆರೋಪಿ ರಹೀನ್ ಮಾಹಿಮ್ನ ನಿರ್ಜನ ಪ್ರದೇಶದಲ್ಲಿ ತಿರುಗಾಡುತ್ತಿದ್ದನು. ಈ ವೇಳೆ ಅನುಮಾನಗೊಂಡ ಪೊಲೀಸರು ರಹೀನ್ ನ್ನು ಬಂಧಿಸಿದ್ದಾರೆ. ಇದೇ ಸ್ಥಳದಲ್ಲಿಯೇ ಶೇಖ್ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಶೇಖ್ ಯಾವತ್ತೂ ನನಗೆ ತಮಾಷೆ ಮಾಡುತ್ತಿದ್ದನು. ಇದರಿಂದ ಸಿಟ್ಟುಗೊಂಡು ಆತನನನ್ನು ಕೊಲೆ ಮಾಡಲು ಸುಮಾರು ಒಂದು ವಾರಗಳ ಹಿಂದೆಯೇ ಪ್ಲಾನ್ ಮಾಡಿದ್ದೆ. ಆದ್ರೆ ಸಮಯ ಮತ್ತು ಜಾಗಕ್ಕೆ ಕಾಯುತ್ತಿದ್ದೆ ಅಂತ ಆರೋಪಿ ಬಾಯ್ಬಿಟ್ಟಿರುವುದಾಗಿ ಸಾಹು ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಆರೋಪಿ ರಹೀನ್ ತನ್ನ ಗೆಳೆಯ ಶೇಖ್ ನನ್ನು ಕುಡಿಯುವ ಪಾರ್ಟಿ ಮಾಡುವುದಾಗಿ ಹೇಳಿ ನಗರದ ಬಾಂದ್ರಾಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಂತೆಯೇ ಇವರಿಬ್ಬರೂ ಬಿಯರ್ ಕೂಡ ತೆಗೆದುಕೊಂಡಿದ್ದರು. ಇಬ್ಬರೂ ಜೊತೆಜೊತೆಯಾಗಿ ಕುಡಿದು, ಸ್ವಲ್ಪ ಸಮಯದ ಬಳಿಕ ಶೌಚಾಲಯಕ್ಕೆ ತೆರಳಿದ ಶೇಖ್ ನ ಹಿಂದೆ ರಹೀನ್ ಕೂಡ ಹೋಗಿದ್ದಾನೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ರಹೀನ್ ತನ್ನ ಕೈಯಲಿದ್ದ ಚೂರಿಯಿಂದ ರಹೀನ್ ಕತ್ತು ಸೀಳಿದ್ದಾನೆ. ಪರಿಣಾಮ ಶೇಖ್ ಕೆಳಗೆ ಬಿದ್ದಿದ್ದಾನೆ. ಇದೇ ವೇಳೆ ರಹೀನ್ ಆತನಿಗೆ 54 ಬಾರಿ ಇರಿದಿದ್ದಾನೆ. ಹೀಗಾಗಿ ಕತ್ತು ಮತ್ತು ಹೊಟ್ಟೆಗೆ ಗಂಭೀರ ಗಾಯಗಳಾಗಿರುವುದರಿಂದ ಶೇಖ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಅಂತ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.