ಚಂಡೀಗಢ: ಆಸ್ತಿಗಾಗಿ ಅಣ್ಣನೇ 21 ವರ್ಷದ ಸಹೋದರಿಯನ್ನು ತನ್ನ ಸೋದರ ಸಂಬಂಧಿ 10 ವರ್ಷದ ಬಾಲಕನ ಜೊತೆ ಮದುವೆ ಮಾಡಿಸಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.
ಈ ಘಟನೆ ಪಿಂಡ ಭಟಿಯಾನ್ ನಗರದ ಹೊರವಲಯದಲ್ಲಿರುವ ಭಾಂಗ್ಸಿಕಾ ಗ್ರಾಮದಲ್ಲಿ ನಡೆದಿದ್ದು, ಯುವತಿಯ ಅಣ್ಣ ಮೇಹ್‍ವಿಷ್ ಮುಂದೇ ನಿಂತು ತನ್ನ ಸಹೋದಸಂಬಂಧಿ ಅಲ್ಲಾ ದತ್ತಾ ಬಾಲಕನ ಜೊತೆ ಮದುವೆ ಮಾಡಿಸಿದ್ದಾನೆ. ಇದನ್ನೂ ಓದಿ: ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ
Advertisement
Advertisement
ತಮ್ಮ ಕುಟುಂಬದ ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಬಲವಂತವಾಗಿ ಯುವತಿಗೆ ಮದುವೆ ಮಾಡಲಾಗಿದೆ. ಈ ಮದುವೆ ಕುರಿತು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿವಾಹ ಕಾನೂನು ಬಾಹಿರವಾಗಿದ್ದು, ಇದನ್ನು ತಡೆಯವಲ್ಲಿ ಮಕ್ಕಳ ರಕ್ಷಣಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Advertisement
ಪಂಜಾಬ್ ಕಾನೂನು ಪ್ರಕಾರ, 18 ವರ್ಷದೊಳಗೆ ಮದುವೆಯಾದರೆ ಅದನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ಬಾಲ್ಯವಿವಾಹ ಮಾಡಿಸಿದ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
Advertisement