– ಫೇಸ್‌ಲೆಸ್ ಸಂಪರ್ಕ ರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ
– ಕೆಲವೇ ದಿನಗಳಲ್ಲಿ ಖಾತೆಗಳಿಗೆ ಜಿಪಿಎಸ್ ಆಧಾರಿತ ಮಾಹಿತಿ ಅಳವಡಿಕೆ
ಬೆಂಗಳೂರು: ಆಸ್ತಿ ಮಾಲೀಕರಿಗೆ, ಖಾತಾದಾರರಿಗೆ ಬಿಬಿಎಂಪಿ ಗುಡ್‌ನ್ಯೂಸ್ ಕೊಟ್ಟಿದೆ. 21 ಲಕ್ಷ ಖಾತೆಗಳನ್ನ ಡಿಜಿಟಲೀಕರಣ ಮಾಡಿ, ಫೇಸ್‌ಲೆಸ್ ಮಾಡಿದೆ. ಪಾಲಿಕೆ ಶೀಘ್ರದಲ್ಲೇ ರೂಲ್ ಔಟ್ ಬಿಡುಗಡೆ ಆಗಲಿದ್ದು, ಖಾತೆಗಳಿಗೆ ಜಿಪಿಎಸ್ ಆ್ಯಡ್ ಮಾಡಲಿದೆ.
ಜನ ಖಾತೆ ಮಾಡಿಸಬೇಕು, ಖಾತೆ ಪಡೆಯುಬೇಕು, ಖಾತೆ ಬಗ್ಗೆ ಮಾಹಿತಿ ಬೇಕು ಎಂದರೆ ಕಂದಾಯ ಕಚೇರಿಗಳಿಗೆ ಹೋಗಿ ಮಾಹಿತಿ ಪಡೆಯಬೇಕಿತ್ತು. ಈಗ ಬಿಬಿಎಂಪಿ ಮತ್ತಷ್ಟು ಸುಲಭ ಮಾಡಿದೆ. ಒಂದೆರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2,500 ಆಸ್ತಿಗಳನ್ನು ಇ-ಖಾತಾ ಮಾಡಿದ್ದ ಬಿಬಿಎಂಪಿ 21 ಲಕ್ಷ ಆಸ್ತಿ ಖಾತೆಗಳನ್ನು ಈಗ ಡಿಜಿಟಲೀಕರಣ ಮಾಡಿದೆ. ಇದೀಗ ಫೇಸ್‌ಲೆಸ್ ಸಂಪರ್ಕ ರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜಿಪಿಎಸ್ ಆಧಾರಿತ ಮಾಹಿತಿಯನ್ನು ಪಡೆದು ಅದನ್ನು ಡಿಜಿಟಲೀಕರಣಗೊಳಿಸಲಿದೆ.
ಬಿಬಿಎಂಪಿ ರಿಜಿಸ್ಟರ್‌ಗಳಲ್ಲಿನ 21 ಲಕ್ಷ ಖಾತೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ರೋಲ್-ಔಟ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಆಗ ಜನ ತಮ್ಮ ಖಾತಾ ಡಿಜಿಟಲೀಕರಣ ಆಗಿರೋದನ್ನ ಸರಿಪಡಿಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿ ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿಪಿಎಸ್ ಮಾಹಿತಿಯನ್ನು ಸೆರೆಹಿಡಿಯುತ್ತಾರೆ. ಪಾಲಿಕೆಯ ಇ-ಖಾತಾ ಪಡೆಯಲು ಪ್ರತಿ ಆಸ್ತಿಯ ಜಿಪಿಎಸ್ ಕಡ್ಡಾಯವಾಗಿದೆ. ಸದರಿ ಪ್ರಾಪರ್ಟಿ ಜಿಪಿಎಸ್ ನಿಮ್ಮ ಆಸ್ತಿಯ ವಿಶಿಷ್ಟ ಗುರುತು ಆಗಿರುತ್ತದೆ. ಎಲ್ಲಾ ಬಿಬಿಎಂಪಿಯ ಇ-ಖಾತಾ ಸೇವೆಗಳ ಫೇಸ್‌ಲೆಸ್, ಸಂಪರ್ಕ ರಹಿತ ಮತ್ತು ಆನ್‌ಲೈನ್ ವಿತರಣೆಗೆ ಇದು ಬಹಳ ಮುಖ್ಯವಾಗಿರುತ್ತದೆ.
ಜಿಪಿಎಸ್‌ನಿಂದ ಅನುಕೂಲಗಳೇನು?
* ಸ್ವತ್ತುಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿಡಲು ಜಿಪಿಎಸ್ ಅಳವಡಿಕೆ
* ಜಿಪಿಎಸ್‌ನ್ನು ಸ್ಥಳಕ್ಕೆ ಅನುಗುಣವಾಗಿ ನಿಯೋಜಿಸುವುದು ಇದರ ಉದ್ದೇಶ
* ಒಂದು ಬಾರಿ ಜಿಪಿಎಸ್ ಮಾಡಿಸಿದ್ರೆ ಬೇರೆ ಯಾರೂ ಭೂಮಿ ಪಡೆಯಲು ಸಾಧ್ಯವಿಲ್ಲ
* ಬಿಬಿಎಂಪಿ ಬಳಿ ಸ್ವತ್ತುಗಳ ಪಟ್ಟಿಯಿದ್ದು ಸದರಿ ಸ್ವತ್ತುಗಳ ಸ್ಥಳ, ನಕ್ಷೆ ಇರುವುದಿಲ್ಲ
* ಆಸ್ತಿಯ ಜಿಪಿಎಸ್ ಸಂಗ್ರಹಣೆಯಿಂದ ಇತರೆ ದಾಖಲೆ ಬಳಸಿ ಪರಭಾರೆ ಮಾಡುವುದರಿಂದ ರಕ್ಷಣೆ
* ಬಹುಮಹಡಿ ಫ್ಲಾಟ್‌ಗಳು ಒಂದೇ ರೀತಿಯ ಜಿಪಿಎಸ್ ಹೊಂದಿರುತ್ತದೆ
* ಫ್ಲಾಟ್ ಸಂಖ್ಯೆ, ಇತರ ವಿವರಗಳನ್ನ ಪಾಲಿಕೆ ದಾಖಲಿಸೋದ್ರಿಂದ ಆಸ್ತಿಯನ್ನ ಗುರುತಿಸಬಹುದು
* ಇದು ಸುರಕ್ಷಿತ ಮತ್ತು ಸಂರಕ್ಷಿತ ಆಸ್ತಿ, ಭೂ ದಾಖಲೆಗಳ ಮೂಲಭೂತ ಬಿಲ್ಡಿಂಗ್ ಬ್ಲಾಕ್ ಆಗಿದೆ
ಬಿಬಿಎಂಪಿ 21 ಲಕ್ಷ ಆಸ್ತಿ ಖಾತಾಗಳಿಗೆ ಡಿಜಿಟಲೀಕರಣ ಮಾಡಿ ಜಿಪಿಎಸ್ ಅಳವಡಿಕೆ ಮಾಡ್ತಿದೆ. ರೂಲ್ ಔಟ್ ಬಿಡುಗಡೆ ಆದ ಬಳಿಕ ಖಾತಾ ಡಿಜಿಟಲೀಕರಣ ಆಗಿದೆಯಾ ಇಲ್ವ ಅಂತಾ ಜನ ಪರಿಶೀಲನೆ ಮಾಡಿ ಕಂದಾಯ ಕಚೇರಿಗಳಿಗೆ ತೆರಳಿ ಇ-ಖಾತಾ ಮಾಡಿಕೊಳ್ಳಬಹುದು. ಜಿಪಿಎಸ್ ಅಳವಡಿಕೆ ಮಾಡ್ತೇವೆ ಅಂದಿದ್ದು, ಯಾವಾಗ ಅಳವಡಿಕೆ ಕಾರ್ಯ ಆರಂಭ ಆಗುತ್ತೆ ಎಂಬುದನ್ನು ಕಾದುನೋಡಬೇಕಿದೆ.